ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಲೂಕು ಎಂಐಎಸ್ ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ನೆರಡು ದಿನ ಅವಕಾಶವಿದೆ. ನರೇಗಾ ಯೋಜನೆಯ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಯ ನೇಮಕಾತಿ ನಡೆಯುತ್ತಿದೆ.
ಹುದ್ದೆ ವಿವರ: ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ- 1
ವಿದ್ಯಾರ್ಹತೆ: ಅಧಿಕೃತ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿಸಿಎ ಪದವಿ
ಅನುಭವ: ಕನಿಷ್ಠ 2 ರಿಂದ 3 ವರ್ಷ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಅನುಭವ
ವಯೋಮಿತಿ: ಕನಿಷ್ಠ 25 ಮತ್ತು ಗರಿಷ್ಠ ವಯೋಮಿತಿ 40 ವರ್ಷ
ವೇತನ: ಮಾಸಿಕ 28,000 ಮತ್ತು 2,000 ಟಿಎ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಜುಲೈ 12. ಈ ಕುರಿತ ಹೆಚ್ಚಿನ ಮಾಹಿತಿಗೆ zpkarwar.kar.nic.in ಭೇಟಿ ನೀಡಿ.
ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿ:ಇಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತದೆ. ವಿಜಯಪುರದಲ್ಲಿ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಎಂಎಸ್ಸಿ (ಕೃಷಿ) ಪದವಿ ಪಡೆದಿರಬೇಕು. ಮಾಸಿಕ 40 ರಿಂದ 45 ಸಾವಿರ ರೂ ವೇತನ ನಿಗದಿಸಲಾಗಿದೆ.
ನೇರ ಸಂದರ್ಶನವನ್ನು ಜುಲೈ 18ರಂದು ಬೆಳಗ್ಗೆ 11ಗಂಟೆಗೆ ವಿಜಯಪುರದಲ್ಲಿನ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುತ್ತದೆ. ಸಂದರ್ಶನ ಕೊಠಡಿ, ಡೀನ್ (ಕೃಷಿ) ಕೃಷಿ ವಿವಿ, ವಿಜಯಪುರ.
ಈ ಕುರಿತು ಹೆಚ್ಚಿನ ಮಾಹಿತಿಗೆuasd.eduಭೇಟಿ ನೀಡಿ.
ಇದನ್ನೂ ಓದಿ: ಕೋಸ್ಟ್ ಗಾರ್ಡ್ ನೇಮಕಾತಿ: ನಾವಿಕ್, ಮೆಕಾನಿಕ್ ಹುದ್ದೆಗೆ ಅರ್ಜಿ ದಿನಾಂಕ ವಿಸ್ತರಣೆ