ಹುಬ್ಬಳ್ಳಿ: ಕಿರು ಅವಧಿಯ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ತಕ್ಷಣಕ್ಕೆ ಉದ್ಯೋಗ ಸೇರಬೇಕು ಎಂಬ ಆಶಯ ನಿಮ್ಮಲ್ಲಿದ್ದರೆ, ಅದಕ್ಕೆ ಪೂರಕವಾಗಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ಜಿಲ್ಲೆಯ ಜಿಟಿಟಿಸಿ ಕೇಂದ್ರ ಪರಿಚಯಿಸಿದೆ.
ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಅಭ್ಯರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಒಂದು ವರ್ಷದ ಅವಧಿಯ ಪೋಸ್ಟ್ ಡಿಪ್ಲೊಮಾ ಇನ್ ಮೆಕೆಟ್ರಾನಿಕ್ಸ್ ಆರಂಭಿಸಲಾಗಿದೆ. ಈ ವೃತ್ತಿ ತರಬೇತಿ ಕೋರ್ಸ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಇವರು ಅರ್ಜಿ ಸಲ್ಲಿಕೆಗೆ ಅರ್ಹರು: ಇದರಲ್ಲಿ ಮೆಕ್ಯಾನಿಕಲ್, ಅಟೊಮೊಬೈಲ್, ಎಲೆಕ್ಟ್ರಿಕಲ್, ಮೆಕೆಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ (ಬಿ.ಇ) ಉತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿ ಪಡೆಯಲು ಅರ್ಹರಿರುತ್ತಾರೆ.
ಏನೆಲ್ಲಾ ತರಬೇತಿ: ಒಂದು ವರ್ಷದ ಅವಧಿಯ ಈ ಕೋರ್ಸ್ನಲ್ಲಿ ಎಲೆಕ್ಟ್ರಿಕಲ್ ಇನ್‌ಸ್ಟಾಲೇಶನ್, ಎಲೆಕ್ಟ್ರಿಕಲ್ ಪ್ಯಾನೆಲ್‌ಡಿಸೈನ್, ಮೆಕ್ಯಾನಿಕಲ್ ಆಂಡ್ ಸಿಸ್ಟಮ್ ಡಿಸೈನ್, ಪಿಎಲ್‌ಸಿ, ಸ್ಕಾಡಾ, ಅಟೊಮೇಶನ್, ಸಿಎನ್‌ಸಿ ಮೈಂಟೇನನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ರೋಬೋಟಿಕ್ಸ್ ಮತ್ತು ಪ್ರೊಜೆಕ್ಟ್ ಡೆವಲಪ್‌ಮೆಂಟ್ ವಿಷಯಗಳಲ್ಲಿ ಪರಿಣಿತಿ ಹೊಂದುವಷ್ಟು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ತರಬೇತಿಯ ಕೊನೆಯಲ್ಲಿ ಕ್ಯಾಂಪಸ್ ಸಂದರ್ಶನಗಳ ಮೂಲಕ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 10 ರೊಳಗಾಗಿ ಪ್ರವೇಶ ಪಡೆಯಬೇಕಾಗಿದ್ದು, ತರಬೇತಿಯು ಸೆಪ್ಟೆಂಬರ್ 15ರಿಂದ ಪ್ರಾರಂಭವಾಗಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಜಿಟಿಟಿಸಿ, ಇಂಡಸ್ಟ್ರಿಯಲ್ ಎಸ್ಟೇಟ್, ಗೋಕುಲ್ ರಸ್ತೆ, ಹುಬ್ಬಳ್ಳಿ ಕಚೇರಿ. ಅಥವಾ ದೂರವಾಣಿ ಸಂಖ್ಯೆ 8183860552, 0836-2333159, 155267 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: ಗಣೇಶನ ಹಬ್ಬಕ್ಕೆ ಸಿಹಿ ಸುದ್ದಿ: ಇನ್ಮುಂದೆ ಹುಬ್ಬಳ್ಳಿ- ಧಾರವಾಡ ಬೈಪಾಸ್ನಲ್ಲಿ ಟೋಲ್ ಫ್ರೀ ಸಂಚಾರ - TOLL FREE