ಕರ್ನಾಟಕ

karnataka

ETV Bharat / education-and-career

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ಆಗಸ್ಟ್​ 28ರಂದು ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳ - Hubballi Job Fair - HUBBALLI JOB FAIR

ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು 18ರಿಂದ 35 ವಯೋಮಿತಿ ಹೊಂದಿದವರು ಸಂದರ್ಶನಕ್ಕೆ ಹಾಜರಾಗಬಹುದು.

hubballi-district-job-exchange-centre-organise-job-fair-in-navanagar
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Aug 23, 2024, 6:51 PM IST

ಹುಬ್ಬಳ್ಳಿ: ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಗಸ್ಟ್ 28ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಖಾಸಗಿ ಉದ್ಯೋಗ ಸಂಸ್ಥೆಗಳು ಭಾಗಿ:ಈ ಮೇಳದಲ್ಲಿ 6 ಖಾಸಗಿ ವಲಯದ ಉದ್ಯೋಗದಾತರುಗಳು ಭಾಗವಹಿಸಲಿದ್ದು, ಅವರ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಾಸಾದ 18ರಿಂದ 35 ವಯೋಮಿತಿ ಹೊಂದಿದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಅಭ್ಯರ್ಥಿಗಳು https://forms.gle/qdtkEhLjQsdC1GD68 ವೆಬ್ ಸೈಟ್ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು.

ಈ ದಾಖಲಾತಿ ಅವಶ್ಯಕ: ಉದ್ಯೋಗ ಮೇಳದಲ್ಲಿ ಭಾಗವಹಿಸುವ ಇಚ್ಛೆ ಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಆಧಾರ್‌ ಕಾರ್ಡ್, ಬಯೋಡಾಟಾ (ರೆಸ್ಯೂಮ್)ಗಳ ಹೆಚ್ಚಿನ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಮೇಳದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕುವೆಂಪು ರಸ್ತೆ, ನವನಗರ ಹುಬ್ಬಳ್ಳಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 0836-2225288, 9535360259, 8453208555, 9806905751 ಸಂಪರ್ಕಿಸಬಹುದು.

ಇದನ್ನೂ ಓದಿ: ಕೃಷಿ ವಿದ್ಯಾಲಯಗಳಲ್ಲಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ABOUT THE AUTHOR

...view details