ನವದೆಹಲಿ: ಜರ್ಮನಿಯ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಹೊಸ ಎಸ್ 1000 ಎಕ್ಸ್ಆರ್ (S 1000 XR) ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಮ್ ಬೆಲೆ 22,50,000 ರೂಪಾಯಿ ಆಗಿದೆ.
ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್, ಗ್ರಾವಿಟಿಬ್ಲೂ ಮೆಟಾಲಿಕ್ (ಸ್ಟೈಲ್ ಸ್ಪೋರ್ಟ್ಸ್ ನೊಂದಿಗೆ) ಮತ್ತು ಲೈಟ್ ವೈಟ್ ಸಾಲಿಡ್ ಪೇಂಟ್ / ಮೋಟಾರ್ ಸ್ಪೋರ್ಟ್ (ಎಂ ಪ್ಯಾಕೇಜ್ ನೊಂದಿಗೆ) ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುವ ಈ ಹೊಸ ಮೋಟಾರ್ ಸೈಕಲ್ ಸಂಪೂರ್ಣವಾಗಿ ಬಿಲ್ಟ್ ಅಪ್ ಯುನಿಟ್ ಆಗಿ (ಸಿಬಿಯು) ಲಭ್ಯವಿದೆ ಮತ್ತು ಈಗ ಎಲ್ಲ ಬಿಎಂಡಬ್ಲ್ಯು ಮೋಟರ್ಸ್ನ ಅಧಿಕೃತ ಡೀಲರ್ ಶಿಪ್ ಗಳಲ್ಲಿ ಬುಕಿಂಗ್ ಗೆ ಲಭ್ಯವಿದೆ.
ಏನಿದರ ಕಾರ್ಯಕ್ಷಮತೆ?:"ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ ಆರ್ ಸ್ಪೋರ್ಟ್ ಬೈಕ್ ಅತಿ ದೂರ ಸಾಗುವ ಸಾಮರ್ಥ್ಯ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿದೆ" ಎಂದು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪಾವಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಪ್ರಮುಖವಾದ ಎಲ್ಲ ಅಂಶಗಳಲ್ಲಿ ಸುಧಾರಿಸಲಾದ ಈ ಮೋಟಾರ್ ಸೈಕಲ್ನಲ್ಲಿ ಸುದೀರ್ಘ ಪ್ರಯಾಣವನ್ನು ಬಹಳ ಆರಾಮದಾಯಕವಾಗಿ ಮಾಡಬಹುದಾಗಿದೆ. ನಿಮಗೆ ಬೇಕಾದಷ್ಟು ದೂರ ಸಾಗಿರಿ ಮತ್ತು ಮನ ತುಂಬಿದಾಗ ನಿಲ್ಲಿರಿ" ಎಂದು ಅವರು ಹೇಳಿದರು.
ಇನ್-ಲೈನ್ 4 ಸಿಲಿಂಡರ್ ಎಂಜಿನ್:ಹೊಸ ಬಿಎಂಡಬ್ಲ್ಯು ಎಸ್ 1000 ಎಕ್ಸ್ಆರ್ ಬೈಕಿನಲ್ಲಿ ಇನ್-ಲೈನ್ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ಇದು ಇನ್ ಟೇಕ್ ಚಾನೆಲ್ಗಳಿಗೆ ಫ್ಲೋ-ಆಪ್ಟಿಮೈಸ್ಡ್ ಜಾಮೆಟ್ರಿಯೊಂದಿಗೆ ಇನ್ನಷ್ಟು ಪ್ರಭಾವಶಾಲಿ ಕಾರ್ಯಕ್ಷಮತೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಎಂಜಿನ್ 11,000 ಆರ್ ಪಿಎಂನಲ್ಲಿ 170 ಬಿಹೆಚ್ ಪಿ ಪವರ್ ಮತ್ತು 9,250 ಆರ್ ಪಿಎಂನಲ್ಲಿ 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 0-100 ಕಿ.ಮೀ ವೇಗವನ್ನು 3.25 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ ಮತ್ತು ಗಂಟೆಗೆ 253 ಕಿ.ಮೀ ಗರಿಷ್ಠ ವೇಗವನ್ನು ತಲುಪುತ್ತದೆ.
ಏನೆಲ್ಲ ಹೊಸ ವೈಶಿಷ್ಠ್ಯಳಿವೆ ಗೊತ್ತಾ?:ಹೊಸ ಎಸ್ 1000 ಎಕ್ಸ್ ಆರ್ ಟೂರಿಂಗ್ ಮತ್ತು ಡೈನಾಮಿಕ್ ಪ್ಯಾಕೇಜ್ ಗಳನ್ನು ಒಳಗೊಂಡಂತೆ ವಿಸ್ತೃತ ಸ್ಟ್ಯಾಂಡರ್ಡ್ ಎಕ್ವಿಪ್ ಮೆಂಟ್ಗಳನ್ನು ಹೊಂದಿದೆ. ಇದು ದೀರ್ಘ ಬೈಕ್ ಪ್ರಯಾಣಗಳಿಗೆ ಅಗತ್ಯವಾದ ಉಪಕರಣಗಳನ್ನು ಹೊಂದಿದೆ ಮತ್ತು ಅದೇ ಸಮಯದಲ್ಲಿ ಹೆಚ್ಚುವರಿ ಕಾರ್ಯಕ್ಷಮತೆ ಮತ್ತು ಆರಾಮದಾಯಕತೆಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಜರ್ಮನಿಯ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಗುಣಮಟ್ಟದ ಸ್ಪೋರ್ಟ್ಸ್ ಸೆಡಾನ್ ಗಳು ಮತ್ತು ಮೋಟಾರ್ ಸೈಕಲ್ಗಳಿಗೆ ಹೆಸರುವಾಸಿಯಾಗಿದೆ ಮತ್ತು ವಿಶ್ವದ ಪ್ರಮುಖ ಬ್ರಾಂಡ್ಗಳಲ್ಲಿ ಒಂದಾಗಿದೆ. ಇದರ ಪ್ರಧಾನ ಕಚೇರಿ ಮ್ಯೂನಿಚ್ನಲ್ಲಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಬಿಎಂಡಬ್ಲ್ಯು ವಿಶ್ವದ ಮೊದಲ ಜೆಟ್ ವಿಮಾನ ಎಂಜಿನ್ಗಳನ್ನು ನಿರ್ಮಿಸಿತ್ತು. ಜರ್ಮನಿಯ ವಾಯುಪಡೆಯು ಈ ಎಂಜಿನ್ಗಳನ್ನು ಬಳಸಿತ್ತು.
ಇದನ್ನೂ ಓದಿ : ಕಳೆದ ವಾರ 23 ಕೋಟಿ ಡಾಲರ್ ಫಂಡಿಂಗ್ ಸಂಗ್ರಹಿಸಿದ 26 ಭಾರತೀಯ ಸ್ಟಾರ್ಟ್ಅಪ್ಗಳು - Startup Funding