ಕರ್ನಾಟಕ

karnataka

ETV Bharat / business

ಒಟಿಟಿ ಪ್ರಿಯರಿಗೆ ಗುಡ್​ನ್ಯೂಸ್: ಕೇವಲ ₹299ಕ್ಕೆ ಜಿಯೋ ಸಿನಿಮಾ ಪ್ರಿಮಿಯಂ 4K ಸ್ಟ್ರೀಮಿಂಗ್ - JioCinema 299 Plan - JIOCINEMA 299 PLAN

ಒಟಿಟಿ ಪ್ರಿಯರಿಗಾಗಿ ಕಡಿಮೆ ಬೆಲೆಯಲ್ಲಿ ಜಿಯೋ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಕುರಿತಾದ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಒಟಿಟಿ ಪ್ರಿಯರಿಗೆ ಗುಡ್​ನ್ಯೂಸ್
ಒಟಿಟಿ ಪ್ರಿಯರಿಗೆ ಗುಡ್​ನ್ಯೂಸ್ (ETV Bharat)

By ETV Bharat Karnataka Team

Published : May 25, 2024, 10:26 PM IST

JioCinema 299 Premium Annual Plan: ಒಟಿಟಿ ಪ್ರಿಯರಿಗಾಗಿ ಟೆಲಿಕಾಂ ದೈತ್ಯ ಜಿಯೋ ಹೊಸ ಪ್ರೀಮಿಯಂ ವಾರ್ಷಿಕ ಚಂದಾದಾರಿಕೆ ಯೋಜನೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಇದ್ದ ರೂ.999 ವಾರ್ಷಿಕ ಯೋಜನೆಯ ಪ್ರಯೋಜನೆಗಳನ್ನೇ ಈ ಹೊಸ ಯೋಜನೆ ಹೊಂದಿರಲಿದೆ ಎಂದು ಸಂಸ್ಥೆ ತಿಳಿಸಿದೆ.

JioCinema 299 Plan Benefits:ಈ ಯೋಜನೆಯ ಮೂಲಕ ಜಾಹೀರಾತು ರಹಿತವಾಗಿರಲಿದೆ. ಜತೆಗೆ ಚಂದಾದಾರರು ಒಂದು 4K ರೆಸಲ್ಯೂಶನ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ. ಪ್ರಸ್ತುತ ಈ ಯೋಜನೆಯನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಶೀಘ್ರದಲ್ಲೇ ಇದರ ಬೆಲೆಯನ್ನು 599ಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಆದರೆ, ಇದು ರೂ.999ಕ್ಕಿಂತ ಕಡಿಮೆ ಇರಲಿದೆ.

Jio ಸಿನಿಮಾ ವೆಬ್‌ಸೈಟ್ ಪ್ರಕಾರ ರೂ.299 ಪ್ರೀಮಿಯಂ ಯೋಜನೆಯನ್ನು ತೆಗೆದುಕೊಳ್ಳುವವರು ತಮ್ಮ ಆಯ್ಕೆಯ ಪ್ರೀಮಿಯಂ ವಿಡಿಯೋಗಳನ್ನು ಡೌನ್‌ಲೋಡ್ ಮಾಡಬಹುದು, ಯಾವಾಗ ಬೇಕಾದರೂ ವೀಕ್ಷಿಸಬಹುದಾಗಿದೆ. ಪ್ರಸ್ತುತ, HBO, ಪೀಕಾಕ್, ವಾರ್ನರ್ ಬ್ರದರ್ಸ್ ಮತ್ತು ಪ್ಯಾರಾಮೌಂಟ್‌ ಪ್ರೀಮಿಯಂ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ಲಭ್ಯವಿದೆ.

ಕ್ರೀಡೆ ಮತ್ತು ಲೈವ್ ಕಾರ್ಯಕ್ರಮಗಳ:ರೂ.299 ಪ್ರೀಮಿಯಂ ಯೋಜನೆಯನ್ನು ತೆಗೆದುಕೊಳ್ಳುವವರು ಕ್ರೀಡೆ ಮತ್ತು ಲೈವ್ ಕಾರ್ಯಕ್ರಮಗಳನ್ನು ಆನಂದಿಸಬಹುದು. ಆದರೆ, ಇದು ಜಾಹೀರಾತು ಒಳಗೊಂಡಿರಲಿದೆ. ಇಷ್ಟು ಹಣ ಪಾವವತಿಸಲು ಸಾಧ್ಯವಾಗದಿದ್ದರೆ, ನೀವು ಕೇವಲ ರೂ. 29ಕ್ಕೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಪಡೆಯಬಹುದಾಗಿದೆ. ಅದನ್ನು ನವೀಕರಿಸಿದಾಗ, ನೀವು ರೂ.59 ಪಾವತಿಸಬೇಕಾಗುತ್ತದೆ. ಅದಕ್ಕಾಗಿ ಈ ರೂ. 299 ವಾರ್ಷಿಕ ಪ್ರೀಮಿಯಂ ಯೋಜನೆ ಉತ್ತಮ ಆಯ್ಕೆಯಾಗಿದೆ.

Jio Cinema Family Plan :ಜಿಯೋ ಸಿನಿಮಾ ಮಾಸಿಕ ಕುಟುಂಬ ಯೋಜನೆಯನ್ನು ಸಹ ಹೊಂದಿದೆ. ಇದರ ಬೆಲೆ ಕೇವಲ 89 ರೂ. ಈ ಯೋಜನೆಯ ಬಳಕೆದಾರರು ಏಕಕಾಲದಲ್ಲಿ 4 ಸಾಧನಗಳಲ್ಲಿ ಬಳಕೆ ಮಾಡಬಹುದಾಗಿದೆ. ಪ್ರಸ್ತುತ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ ಸ್ಟಾರ್ ನೀಡುವ ಪ್ಲಾನ್‌ಗಳಿಗೆ ಹೋಲಿಸಿದರೆ, ಜಿಯೋಸಿನಿಮಾ ಪ್ರೈಮ್ ನೀಡುವ ಪ್ಲಾನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ:ಡಿಡಿ ಕಿಸಾನ್​ನಲ್ಲಿ 50 ಭಾಷೆಗಳಲ್ಲಿ ಸುದ್ದಿ ಓದಲಿದ್ದಾರೆ ಎಐ ಆ್ಯಂಕರ್ಸ್​ - DD Kisan Adopts AI Anchors

ABOUT THE AUTHOR

...view details