ಕರ್ನಾಟಕ

karnataka

ETV Bharat / bharat

ಅಬ್ಬಬ್ಬಾ ಬರೋಬ್ಬರಿ 810 ಕೆ.ಜಿ ಬಂಗಾರ ಸಾಗಿಸುತ್ತಿದ್ದ ಟ್ರಕ್​​ ಅಪಘಾತ: ಅಷ್ಟಕ್ಕೂ ಮಧ್ಯರಾತ್ರಿ ನಡೆದಿದ್ದೇನು? - What happened in Midnight - WHAT HAPPENED IN MIDNIGHT

ಒಂದಲ್ಲ ಎರಡಲ್ಲ ಬರೋಬ್ಬರಿ 810 ಕೆಜಿ ಬಂಗಾರವನ್ನು ತೆಗೆದುಕೊಂಡು ಹೋಗುತ್ತಿದ್ದ ಟ್ರಕ್​ ಮಧ್ಯರಾತ್ರಿ ಅಪಘಾತಕ್ಕೀಡಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಮುಂದೇನಾಯ್ತು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ನೋಡಿ.

Truck carried 810 kg Gold met accident; What happened in Midnight?
ಅಬ್ಬಬ್ಬಾ ಬರೋಬ್ಬರಿ 810 ಕೆ.ಜಿ ಬಂಗಾರ ಸಾಗಿಸುತ್ತಿದ್ದ ಟ್ರಕ್​​ ಅಪಘಾತ: ಅಷ್ಟಕ್ಕೂ ಮಧ್ಯರಾತ್ರಿ ನಡೆದಿದ್ದೇನು? (ETV Bharat)

By ETV Bharat Karnataka Team

Published : May 7, 2024, 7:42 PM IST

ಈರೋಡ್/ಚೆನ್ನೈ (ತಮಿಳುನಾಡು): ಕೊಯಮತ್ತೂರಿನಿಂದ ಸೇಲಂಗೆ ಚಿನ್ನಾಭರಣ ಸಾಗಿಸುತ್ತಿದ್ದ ವಾಹನವೊಂದು ಅಪಘಾತಕ್ಕೀಡಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಚಿತ್ತೋಡ್ ಪೊಲೀಸರು ಸಶಸ್ತ್ರ ಪೊಲೀಸರ ಮೂಲಕ ಪರ್ಯಾಯ ವಾಹನದಲ್ಲಿ ಚಿನ್ನಾಭರಣವನ್ನು ಸೇಲಂಗೆ ವಾಪಸ್ ಕಳುಹಿಸಿದ್ದಾರೆ.

ಚಿತ್ತೋಡ್ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸೇಲಂ - ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ವೆಲ್ ಲಾಜಿಸ್ಟಿಕ್ಸ್ ಹೆಸರಿನ ಟ್ರಕ್ ಕೊಯಮತ್ತೂರಿನಿಂದ ಸೇಲಂಗೆ ತೆರಳುತ್ತಿತ್ತು. ಟ್ರಕ್‌ನಲ್ಲಿ ಚಿನ್ನಾಭರಣಗಳು ಮತ್ತು ವಿವಿಧ ಖಾಸಗಿ ಆಭರಣ ಮಳಿಗೆಗಳಿಗೆ ಕಳುಹಿಸಲು ಚಿನ್ನದ ಆಭರಣಗಳು, ಗಟ್ಟಿ ಸೇರಿದಂತೆ ಇತರ ಚಿನ್ನದ ಸಾಮಗ್ರಿಗಳನ್ನು ತುಂಬಲಾಗಿತ್ತು. ಈ ಟ್ರಕ್​ನಲ್ಲಿ ಒಂದಲ್ಲ ಎರಡಲ್ಲ, ಲಕ್ಷವೂ ಅಲ್ಲ, ನೂರಾರು ಕೋಟಿ ಮೌಲ್ಯದ ಬಂಗಾರ ಇತ್ತು. ಸುಮಾರು 810 ಕೆಜಿ ತೂಕದ ಈ ಚಿನ್ನ ಟ್ರಕ್​​ನಲ್ಲಿತ್ತು. ಇದರ ಒಟ್ಟಾರೆ ಮೌಲ್ಯ ಸುಮಾರು 666 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಚಾಲಕ ಶಶಿಕುಮಾರ್ (29) ಲಾರಿ ಚಾಲನೆ ಮಾಡುತ್ತಿದ್ದು, ಬಂದೂಕು ಹಿಡಿದ ಅಂಗರಕ್ಷಕ ಪಾಲ್ರಾಜ್ (40) ಮತ್ತು ಸಹಾಯಕ ನವೀನ್ ( 21) ಜೊತೆಗಿದ್ದರು. ಸೇಲಂ ಕಡೆಗೆ ಹೋಗುತ್ತಿದ್ದ ವಾಹನ ತಿರುವಿನಲ್ಲಿ ಹೋಗುತ್ತಿದ್ದಾಗ ಪಲ್ಟಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಸರಕು ಸಾಗಣೆ ವಾಹನದ ಚಾಲಕ ಶಶಿಕುಮಾರ್ ಮತ್ತು ಭದ್ರತಾ ಸಿಬ್ಬಂದಿ ಪಾಲ್ರಾಜ್ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಚಿತ್ತೋಡ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಚಾಲಕ ಶಶಿಕುಮಾರ್ ಮತ್ತು ಸೆಕ್ಯೂರಿಟಿ ಗಾರ್ಡ್ ಪಾಲ್ರಾಜ್ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಭವಾನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾದ ಸರಕು ಸಾಗಣೆ ವಾಹನವನ್ನು ಚಿನ್ನಾಭರಣದೊಂದಿಗೆ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಆ ಬಳಿಕ ವಾಣಿಜ್ಯ ತೆರಿಗೆ ಅಧಿಕಾರಿಗಳ ತಪಾಸಣೆ ನಡೆಸಿದರು. ಅಧಿಕಾರಿಗಳ ತಪಾಸಣೆ ಬಳಿಕ ಬದಲಿ ವಾಹನದಲ್ಲಿ ಶಸ್ತ್ರಸಜ್ಜಿತ ಪೊಲೀಸರೊಂದಿಗೆ ಚಿನ್ನಾಭರಣವನ್ನು ಸೇಲಂಗೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಅಪಘಾತದ ಕುರಿತು ಚಿತ್ತೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ:ಈ ವಾರ 340 ಮಿಲಿಯನ್ ಡಾಲರ್​ ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು - startup funding

ABOUT THE AUTHOR

...view details