ತಿನ್ಸುಕಿಯಾ: ಅಸ್ಸೋಂನ ತಿನ್ಸುಕಿಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ದೀಪಂಕರ್ ಬೋರಾ ಬುಧವಾರದಂದು ಆರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಈ ಆರು ಪೊಲೀಸರು ತಿನ್ಸುಕಿಯಾದಲ್ಲಿ ಯುವಕನಿಗೆ ಚಿತ್ರಹಿಂಸೆ ನೀಡಿ, ಆತನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಭಾಗಿಯಾಗಿದ್ದರು.
2013ರಲ್ಲಿ, ಸಾದಿಯಾ ಉಪವಿಭಾಗದ ಅಂಬಿಕಾಪುರದ 19ಎಪಿ (ಐಆರ್) ಬೆಟಾಲಿಯನ್‌ನ ಕ್ಯಾಂಪ್‌ನಲ್ಲಿ ಈ ಪೊಲೀಸರನ್ನು ನಿಯೋಜಿಸಲಾಗಿತ್ತು. ಆ ಸಂದರ್ಭ ಯುವಕನೊಬ್ಬನನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದರು. ನಂತರ, ದಿಬ್ರುಗಢ್‌ನ ಎಎಂಸಿಹೆಚ್‌ನಲ್ಲಿ ಯುವಕ ಸಾವನಪ್ಪಿದ್ದ.
ತಿನ್ಸುಕಿಯಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ದೀಪಂಕರ್ ಬೋರಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿ ಆರು ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸಬ್ ಇನ್ಸ್‌ಪೆಕ್ಟರ್ ವಿಶಾಲ್ ಬೋರೋ, ಹವಾಲ್ದಾರ್ ಅನಂತ ದುವಾರಾ, ಕಾನ್‌ಸ್ಟೇಬಲ್ ಭರತ್ ಗೊಗೋಯ್, ಗಿರಿನ್ ಸೈಕಿಯಾ, ಉತ್ಪಲ್ ಕಾಕತಿ ಮತ್ತು ಅನಂತ ಕಾಕತಿ ಶಿಕ್ಷೆಗೊಳಗಾದವರು.
2013ರ ಅಕ್ಟೋಬರ್ 7ರ 1 ಗಂಟೆ ಸುಮಾರಿಗೆ ಅಜಿತ್ ಸೋನೋವಾಲ್ ಎಂಬ ಸ್ಥಳೀಯ ವ್ಯಕ್ತಿಯನ್ನು ಅಂಬಿಕಾಪುರ ಮಾರುಕಟ್ಟೆಯಿಂದ ಪೊಲೀಸ್ ತಂಡ ಥಳಿಸಿ ಶಿಬಿರಕ್ಕೆ ಕರೆದೊಯ್ದಿತ್ತು. ಬಳಿಕ ಸಾದಿಯಾ ಪೊಲೀಸರು ಯುವಕರನ್ನು ಶಿಬಿರದಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರ ಥಳಿತಕ್ಕೊಳಗಾದ ಯುವಕನ ಆರೋಗ್ಯ ಹದಗೆಟ್ಟ ಕಾರಣ ಉತ್ತಮ ಚಿಕಿತ್ಸೆಗಾಗಿ ದಿಬ್ರುಗಥ್ನ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅಜಿತ್ ಸೋನೋವಾಲ್ ಕೊನೆಯುಸಿರೆಳೆದರು.