ರಾಜಸಮಂದ್(ರಾಜಸ್ಥಾನ): ನಿರ್ಮಾಣ ಹಂತದ ಸಮುದಾಯ ಭವನ ಕಟ್ಟಡದ ಮೇಲ್ಚಾವಣಿ ಕುಸಿದು ನಾಲ್ವರು ಸಾವನ್ನಪ್ಪಿದ ಘಟನೆ ರಾಜಸಮಂದ್ ಎಂಬಲ್ಲಿ ಸೋಮವಾರ ರಾತ್ರಿ ಸಂಭವಿಸಿತು. ಸತತ ಐದು ಗಂಟೆಗಳ ಕಾರ್ಯಾಚರಣೆಯ ಬಳಿಕ ಅವಶೇಷಗಳಡಿ ಸಿಲುಕಿದ್ದ 9 ಜನರನ್ನು ರಕ್ಷಿಸಲಾಯಿತು. ಗಾಯಾಳುಗಳನ್ನು ನಾಥದ್ವಾರದ ಗೋವರ್ಧನ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಭನ್ವರ್ಲಾಲ್ ತಿಳಿಸಿದರು.
ಚಿಕ್ಲ್ವಾಸ್ ಗ್ರಾಮದಲ್ಲಿ ಮೇಘವಾಲ್ ಸಮುದಾಯದವರು ಸಮುದಾಯ ಭವನ ನಿರ್ಮಿಸುತ್ತಿದ್ದರು. ಮೇಲ್ಚಾವಣಿಯ ನೆರವಿಗೆ ಇಟ್ಟಿದ್ದ ಬಿದಿರಿನ ಕಂಬವನ್ನು ತೆಗೆದು ಹಾಕಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಟ್ಟಡದಲ್ಲಿ ಸ್ವಚ್ಛತೆ ಮತ್ತು ಪೈಂಟಿಂಗ್ಗಾಗಿ 13 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.