ರೂರ್ಕಿ(ಉತ್ತರಾಖಂಡ):ಐಐಟಿ ರೂರ್ಕಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಠಡಿಯೊಳಗೆ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು ಕೊಠಡಿಯ ಬಾಗಿಲು ಒಡೆದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ವಿದ್ಯಾರ್ಥಿ ರಾಜಸ್ಥಾನದ ನಿವಾಸಿ ಎನ್ನಲಾಗಿದೆ. ಆದರೆ, ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೃತ ವಿದ್ಯಾರ್ಥಿಯು ಐಐಟಿಯಲ್ಲಿ ಬಿಎಸ್-ಎಂಎಸ್ ವ್ಯಾಸಂಗ ಮಾಡುತ್ತಿದ್ದ. ಈತನಿಗೆ ರೂಮ್ ಪಾರ್ಟನರ್ ಕೂಡ ಇದ್ದ ಎನ್ನಲಾಗಿದೆ. ಆದರೆ ಘಟನೆ ನಡೆದ ಸಂದರ್ಭದಲ್ಲಿ ಅವರು ರಜೆಯ ಮೇಲೆ ತಮ್ಮ ಮನೆಗೆ ತೆರಳಿದ್ದರು. ಬುಧವಾರ ವಿದ್ಯಾರ್ಥಿ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಆತನ ಪಕ್ಕದ ಕೊಠಡಿಯಲ್ಲಿ ವಾಸವಿದ್ದ ವಿದ್ಯಾರ್ಥಿಗಳು ಐಐಟಿಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಬಾಗಿಲು ತೆರೆಯಲು ಯತ್ನಿಸಿದಾಗ ಕೊಠಡಿ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ಕರೆ ಮಾಡಿದರೂ ಕೋಣೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ನಂತರ ಪೊಲೀಸರಿಗೆ ವಿಷಯ ತಿಳಿಸಲಾಯಿತು.