ಕರ್ನಾಟಕ

karnataka

ETV Bharat / bharat

'ವಂದನಾ ನಿರ್ಣಯ'ಕ್ಕೆ ಲೋಕಸಭೆಯಲ್ಲಿ ಪ್ರಧಾನಿ ಉತ್ತರ: ಬಿಜೆಪಿ ಸಂಸದರಿಗೆ ವಿಪ್​ ಜಾರಿ - Prime Minister Narendra Modi

ಲೋಕಸಭೆಯಲ್ಲಿ ಇಂದು (ಸೋಮವಾರ) 'ವಂದನಾ ನಿರ್ಣಯ'ಕ್ಕೆ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ. ಸದನದಲ್ಲಿ ಭಾಗವಹಿಸುವಂತೆ ಬಿಜೆಪಿ ಸಂಸದರಿಗೆ ವಿಪ್​ ಜಾರಿ ಮಾಡಲಾಗಿದೆ.

ವಂದನಾ ನಿರ್ಣಯ  Motion of Thanks  Lok Sabha  Prime Minister Narendra Modi  ಪ್ರಧಾನಿ ನರೇಂದ್ರ ಮೋದಿ
ಲೋಕಸಭೆಯಲ್ಲಿಂದು 'ವಂದನಾ ನಿರ್ಣಯ'ಕ್ಕೆ ಪ್ರಧಾನಿ ಮೋದಿಯಿಂದ ಉತ್ತರ: ಸದನದಲ್ಲಿ ಭಾಗವಹಿಸುವಂತೆ ಬಿಜೆಪಿ ಸಂಸದರಿಗೆ ವಿಪ್​ ಜಾರಿ

By ETV Bharat Karnataka Team

Published : Feb 5, 2024, 9:27 AM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಜೆಟ್ ಅಧಿವೇಶನದ ಮೊದಲ ದಿನವಾದ ಜನವರಿ 31 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಮಧ್ಯೆ, ಭಾರತೀಯ ಜನತಾ ಪಕ್ಷವು ಲೋಕಸಭೆಯಲ್ಲಿರುವ ತನ್ನ ಎಲ್ಲ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ.

ಇದಲ್ಲದೇ, ದಿನದ ಸದನದಲ್ಲಿನ ನಡಾವಳಿಗಳ ಪಟ್ಟಿಯ ಪ್ರಕಾರ, ಲೋಕಸಭೆಯ ಸಂಸದರಾದ ರವನೀತ್ ಸಿಂಗ್ ಮತ್ತು ರಾಮಶಿರೋಮಣಿ ವರ್ಮಾ ಅವರು ನಡೆದ ಸದನದ ಸಭೆಗಳಿಗೆ ಸದಸ್ಯರ ಗೈರು ಹಾಜರಿಯ ಸಮಿತಿಯ ಹನ್ನೆರಡನೇ ಸಭೆಯ ನಡಾವಳಿಗಳನ್ನು ಮಂಡಿಸಲಿದ್ದಾರೆ. ಡಿಸೆಂಬರ್ 14, 2023 ರಂದು ಸಂಸದರಾದ ಪಿಪಿ ಚೌಧರಿ ಮತ್ತು ಎನ್‌ಕೆ ಪ್ರೇಮಚಂದ್ರನ್ ಅವರು 'ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಭಯೋತ್ಪಾದನೆಯನ್ನು ಎದುರಿಸುವುದು' ವಿಷಯದ ಕುರಿತು ವಿದೇಶಾಂಗ ವ್ಯವಹಾರಗಳ ಸಮಿತಿಯ (ಹದಿನೇಳನೇ ಲೋಕಸಭೆ) 28ನೇ ವರದಿಯನ್ನು ಮಂಡಿಸಲಿದ್ದಾರೆ.

ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯಕ್ಕೆ ಸಂಬಂಧಿಸಿದ 'ತರಬೇತಿ ಮಹಾನಿರ್ದೇಶನಾಲಯದ ಕಾರ್ಯನಿರ್ವಹಣೆ' ಕುರಿತು ಕಾರ್ಮಿಕ, ಜವಳಿ ಮತ್ತು ಕೌಶಲ್ಯಾಭಿವೃದ್ಧಿ ಸ್ಥಾಯಿ ಸಮಿತಿಯ 49ನೇ ವರದಿಯಲ್ಲಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಲಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2024-25ನೇ ಸಾಲಿನ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಅಂದಾಜು ಸ್ವೀಕೃತಿ ಮತ್ತು ವೆಚ್ಚಗಳ ಮಾಹಿತಿಯನ್ನು (ಹಿಂದಿ ಮತ್ತು ಇಂಗ್ಲಿಷ್ ಆವೃತ್ತಿಗಳು) ಪ್ರಸ್ತುತಪಡಿಸಲಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಪುನರಾರಂಭವಾಗಲಿದ್ದು, ಸಂಸದರಾದ ಅಶೋಕ್ ಕುಮಾರ್ ಮಿತ್ತಲ್ ಮತ್ತು ಪ್ರಕಾಶ್ ಜಾವಡೇಕರ್ ಅವರು ಇಲಾಖೆಯ ಇಪ್ಪತ್ತೆಂಟನೇ ವರದಿಯ ಪ್ರತಿಯನ್ನು (ಇಂಗ್ಲಿಷ್ ಮತ್ತು ಹಿಂದಿಯಲ್ಲಿ) ಸದನದ ಮುಂದಿಡಲಿದ್ದಾರೆ. ಇಂದು ಸದನದಲ್ಲಿ 'ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಭಯೋತ್ಪಾದನೆಯನ್ನು ಎದುರಿಸುವುದು' ಕುರಿತು ವಿದೇಶಾಂಗ ವ್ಯವಹಾರಗಳ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿ (ಹದಿನೇಳನೇ ಲೋಕಸಭೆ) ವರದಿ ಮಂಡನೆಯಾಗಲಿದೆ.

ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಇಂದು ರಾಜ್ಯಸಭೆಯಲ್ಲಿ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2024 ಮಸೂದೆಯನ್ನು ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯಿದೆ, 1974 ಗೆ ತಿದ್ದುಪಡಿ ಮಾಡುವ ಕುರಿತು ಮಂಡಿಸಲಿದ್ದಾರೆ. ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಹಿಂದಿನ ಕೊನೆಯ ಅಧಿವೇಶನವು ಇದ್ದಾಗಿದ್ದು, ಫೆಬ್ರವರಿ 9 ರಂದು ಮುಕ್ತಾಯಗೊಳ್ಳಲಿದೆ.

ಇದನ್ನೂ ಓದಿ:ಹೈದರಾಬಾದ್‌ನಿಂದ ರಾಂಚಿಗೆ ಮರಳಿದ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು: ವಿಶ್ವಾಸ ಮತ ಗೆಲ್ಲುವ ವಿಶ್ವಾಸ

ABOUT THE AUTHOR

...view details