ಕರ್ನಾಟಕ

karnataka

ETV Bharat / bharat

'ರಾಹುಲ್​ ಗಾಂಧಿ ವಯನಾಡು ಪ್ರಚಾರದಲ್ಲಿ ಕಾಂಗ್ರೆಸ್​ ಸೇರಿ ಮಿತ್ರಪಕ್ಷಗಳ ಬಾವುಟ ಬಳಸಲ್ಲ' - Rahul Gandhis campaign - RAHUL GANDHIS CAMPAIGN

ವಯನಾಡಿನಲ್ಲಿ ರಾಹುಲ್​ ಗಾಂಧಿ ನಡೆಸುವ ಪ್ರಚಾರದಲ್ಲಿ ಕಾಂಗ್ರೆಸ್​ ಸೇರಿದಂತೆ ಯಾವುದೇ ಮಿತ್ರಪಕ್ಷಗಳ ಬಾವುಟವನ್ನು ಬಳಸದಿರಲು ಪಕ್ಷ ತೀರ್ಮಾನಿಸಿದೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

By ETV Bharat Karnataka Team

Published : Apr 14, 2024, 9:34 AM IST

ತಿರುವನಂತಪುರ (ಕೇರಳ):ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಲೀಗ್​ ಮತ್ತು ಎಸ್​ಡಿಪಿಐ ಬೆಂಬಲ ಘೋಷಿಸಿರುವುದು ಕಾಂಗ್ರೆಸ್​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಬಿಜೆಪಿಗೆ ಟೀಕಿಸಲು ಅಸ್ತ್ರವಾಗಿದೆ. ತನ್ನ ಮೇಲೆ ನಕಾರಾತ್ಮಕ ಪರಿಣಾಮ ಬೀರದಿರಲು ಚುನಾವಣಾ ಪ್ರಚಾರದಲ್ಲಿ ಯಾವುದೇ ಪಕ್ಷಗಳ ಬಾವುಟವನ್ನು ಬಳಸದಿರಲು ಕಾಂಗ್ರೆಸ್​ ನಿರ್ಧರಿಸಿದೆ.

ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಸಂಸದ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದಲ್ಲಿ ಯಾವುದೇ ಬಾವುಟವನ್ನು ಬಳಸುವುದಿಲ್ಲ ಎಂದು ಕೆಪಿಸಿಸಿ ಹಂಗಾಮಿ ಮುಖ್ಯಸ್ಥ ಎಂ.ಎಂ.ಹಸನ್ ಶನಿವಾರ ತಿಳಿಸಿದ್ದಾರೆ.

ಗುಡ್ಡಗಾಡಿನಿಂದ ಕೂಡಿರುವ ಕ್ಷೇತ್ರದಲ್ಲಿ ಮುಂದಿನ ವಾರದಿಂದ ರಾಹುಲ್​ ಅವರು ಚುನಾವಣಾ ಪ್ರಚಾರ ನಡೆಸಲಿದ್ದು, ರ್ಯಾಲಿಯಲ್ಲಿ ಕಾಂಗ್ರೆಸ್ ಅಥವಾ ಮಿತ್ರಪಕ್ಷಗಳ ಯಾವುದೇ ಬಾವುಟ ಬಳಸದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ನಿರ್ಧಾರಕ್ಕೆ ಯಾವುದೇ ನಿಖರ ಕಾರಣ ನೀಡಿಲ್ಲ.

ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಸನ್​ ಅವರು, ಪಕ್ಷದ ನಿರ್ಧಾರದ ಹಿಂದಿನ ಕಾರಣಗಳನ್ನು ಮಾಧ್ಯಮಗಳಿಗೆ ತಿಳಿಸುವ ಅಗತ್ಯವಿಲ್ಲ. ವಯನಾಡಿನಲ್ಲಿ ರಾಹುಲ್​ ಪ್ರಚಾರದ ಸಮಯದಲ್ಲಿ ಯಾವುದೇ ಧ್ವಜಗಳನ್ನು ಬಳಸಲಾಗುವುದಿಲ್ಲ. ಪಕ್ಷದ ಚಿಹ್ನೆಯನ್ನು ಮಾತ್ರ ಬಳಸಲಾಗುವುದು ಎಂದು ಉತ್ತರಿಸಿದರು.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ರಾಹುಲ್​ ಗಾಂಧಿ ಅವರು ಏಪ್ರಿಲ್ 15 ಮತ್ತು 16 ರಂದು ವಯನಾಡಿನಲ್ಲಿ ವಿವಿಧ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಮುಂದಿನ ವಾರದಲ್ಲಿ ಅವರು ಕಣ್ಣೂರು, ತ್ರಿಶೂರ್ ಮತ್ತು ತಿರುವನಂತಪುರಂ ಸೇರಿದಂತೆ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಯನಾಡಿನಲ್ಲಿ ರಾಹುಲ್ ಗಾಂಧಿಯವರ ರೋಡ್‌ಶೋ, ಪ್ರಚಾರದಲ್ಲಿ ಕಾಂಗ್ರೆಸ್ ಅಥವಾ ಮಿತ್ರ ಪಕ್ಷವಾದ ಐಯುಎಂಎಲ್‌ನ ಧ್ವಜಗಳನ್ನು ಬಳಸದಂತೆ ನಿರ್ಬಂಧ ಹೇರಿರುವುದನ್ನು ಸಿಪಿಐ (ಎಂ) ಟೀಕಿಸಿದೆ. ಬಿಜೆಪಿ ಟೀಕೆಗಳಿಗೆ ಕಾಂಗ್ರೆಸ್​ ಹೆದರಿದೆ. ಹೀಗಾಗಿ ಪಕ್ಷದ ಬಾವುಟವನ್ನೂ ಬಳಸುವ ಧೈರ್ಯ ಕಳೆದುಕೊಂಡಿದೆ ಎಂದು ವ್ಯಂಗ್ಯವಾಡಿದೆ.

ಚುನಾವಣಾ ಪ್ರಚಾರವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್​ ನಾಯಕರು ಪ್ರತಿಪಾದಿಸಿದ್ದಾರೆ. 2019 ರಲ್ಲಿ ವಯನಾಡಿನಲ್ಲಿ ಗಾಂಧಿ ಅವರು ನಡೆಸಿದ ರೋಡ್​ಶೋ ವೇಳೆ ಕಾಂಗ್ರೆಸ್​ಗಿಂತ ಮಿತ್ರಪಕ್ಷ ಐಯುಎಂಎಲ್​ನ ಬಾವುಟಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಣಿಸಿಕೊಂಡಿದ್ದವು.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ: ನಟಿ ಕಂಗನಾ ವಿರುದ್ಧ ವಿಕ್ರಮಾದಿತ್ಯ ಸಿಂಗ್ ಕಣಕ್ಕೆ - congress candidate list

ABOUT THE AUTHOR

...view details