ಮಹೋಬಾ(ಉತ್ತರ ಪ್ರದೇಶ):ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ಹಿಂದೂ ಪ್ರೇಮಿಗಾಗಿ ಇಸ್ಲಾಂ ಧರ್ಮ ತೊರೆದು ಹಿಂದೂ ಸಂಪ್ರದಾಯದಂತೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಪನ್ವಾಡಿ ಪಟ್ಟಣದ ಗೌರಯ್ಯ ದಾಯಿ ದೇವಸ್ಥಾನದಲ್ಲಿ ಇತ್ತೀಚಿಗೆ ಈ ಮದುವೆ ಕಾರ್ಯಕ್ರಮ ನಡೆಯಿತು.
ಕೊರಳಲ್ಲಿ ಹೂಮಾಲೆ ಧರಿಸಿದ ಜೋಡಿ ಅಗ್ನಿ ಸಾಕ್ಷಿಯಾಗಿ ಏಳು ಸುತ್ತು ಹೆಜ್ಜೆ ಹಾಕಿ, ಜೈ ಶ್ರೀರಾಮ್ ಘೋಷಣೆ ಕೂಗಿದರು. ಮದುಮಗನ ಕುಟುಂಬ ವರ್ಗ ಮತ್ತು ಸ್ನೇಹಿತರು ಮದುವೆಯಲ್ಲಿ ಭಾಗವಹಿಸಿದ್ದರು.
ಮಂತ್ರಗಳ ಪಠಣದೊಂದಿಗೆ ಸನಾತನ ಧರ್ಮದ ಪ್ರಕಾರ ಮದುವೆ ಎರಡು ವರ್ಷಗಳ ಹಿಂದೆ ಯುವತಿ ಈ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಇಬ್ಬರೂ ದೆಹಲಿಯಲ್ಲಿ ವಾಸಿಸುತ್ತಿದ್ದರು. ದೆಹಲಿಯಿಂದ ಮರಳಿದ ನಂತರ ಇದೀಗ ವಿವಾಹವಾಗಿದ್ದಾರೆ.
ವಿವಾಹದ ಬಳಿಕ ಯುವತಿ ಅರ್ಜು ರೈನ್ ತನ್ನ ಹೆಸರನ್ನು ಆರತಿ ಜೈಸ್ವಾಲ್ ಎಂದು ಬದಲಿಸಿದ್ದಾರೆ. ಪತಿ ದಿನೇಶ್ ಜೈಸ್ವಾಲ್ ಹಾಗು ಆರತಿ ಜೈಸ್ವಾಲ್ ಸಂತಸದಿಂದ ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ, ಕಾರವಾರ, ಬೀದರ್ ಸಹಿತ ಮಹಾರಾಷ್ಟ್ರದ ಕನಸು ಇಂದಿಗೂ ನನಸಾಗಿಲ್ಲ: ಡಿಸಿಎಂ ಅಜಿತ್ ಪವಾರ್ - AJIT PAWAR STATEMENT ON BELAGAVI