ಕರ್ನಾಟಕ

karnataka

ETV Bharat / bharat

ಧಾರ್ಮಿಕ ಕ್ಷೇತ್ರಗಳಿರುವ ನಗರಗಳಲ್ಲಿ ಮದ್ಯ ನಿಷೇಧ: ಮಧ್ಯಪ್ರದೇಶ ಸರ್ಕಾರ - LIQUOR BAN IN RELIGIOUS CITIES

ಉಜ್ಜಯಿನಿ, ಓಂಕಾರೇಶ್ವರ ಸೇರಿದಂತೆ ಹಲವು ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ನಗರಗಳಲ್ಲಿ ಮದ್ಯ ನಿಷೇಧಕ್ಕೆ ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ.

ಧಾರ್ಮಿಕ ಕ್ಷೇತ್ರಗಳಿರುವ ನಗರಗಳಲ್ಲಿ ಮದ್ಯ ನಿಷೇಧ
ಧಾರ್ಮಿಕ ಕ್ಷೇತ್ರಗಳಿರುವ ನಗರಗಳಲ್ಲಿ ಮದ್ಯ ನಿಷೇಧ (ETV Bharat)

By PTI

Published : Jan 13, 2025, 4:17 PM IST

ಭೋಪಾಲ್ (ಮಧ್ಯಪ್ರದೇಶ) :ಧಾರ್ಮಿಕ ಆರಾಧನೆಗಳಿಗೆ ಖ್ಯಾತಿಯಾಗಿರುವ, ಪವಿತ್ರ ಕ್ಷೇತ್ರಗಳನ್ನು ಹೊಂದಿರುವ ನಗರಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸೋಮವಾರ ತಿಳಿಸಿದ್ದಾರೆ.

ಈ ಸ್ಥಳಗಳು ಹಿಂದೂ ಧರ್ಮೀಯರ ಪವಿತ್ರ ಕ್ಷೇತ್ರಗಳಾಗಿವೆ. ಹೀಗಾಗಿ, ಕ್ಷೇತ್ರ ಪಾವಿತ್ರ್ಯವನ್ನು ಕಾಪಾಡಲು ಮತ್ತು ಅವುಗಳನ್ನು ಉಳಿಸಿಕೊಂಡು ಹೋಗಲು ಮದ್ಯ ಮಾರಾಟ ನಿಷೇಧದ ಪ್ರಸ್ತಾಪ ಸರ್ಕಾರ ಮುಂದಿದೆ ಎಂದು ಹೇಳಿದರು.

ಧಾರ್ಮಿಕ ನಗರಗಳಲ್ಲಿ ಮದ್ಯ ಮಾರಾಟ ಮತ್ತು ಅದರ ಬಳಕೆಯಿಂದಾಗಿ ಅಲ್ಲಿನ ಪರಿಸರ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ ನಿಷೇಧಕ್ಕೆ ಸಾಧು, ಸಂತರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಆಯಾ ನಗರಗಳಲ್ಲಿ ಮದ್ಯ ನೀತಿ ಬದಲಿಸಲು ಸರ್ಕಾರ ಮುಂದಾಗಲಿದೆ. ಎಲ್ಲರ ಸಲಹೆಗಳನ್ನು ಪರಿಗಣಿಸಲಾಗುವುದು. ಶೀಘ್ರವೇ ಕ್ರಮ ಜಾರಿಗೆ ಬರಲಿದೆ ಎಂದು ಸಿಎಂ ಯಾದವ್​ ಅವರು ಭರವಸೆ ನೀಡಿದರು.

ಇದನ್ನೂ ಓದಿ:ಮಹಾಕುಂಭ ಮೇಳ: ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ ಸ್ಟೀವ್ ಜಾಬ್ಸ್ ಪತ್ನಿ

ABOUT THE AUTHOR

...view details