ಸೂರತ್, ಗುಜರಾತ್: ಇಲ್ಲಿನ ಹಜಿರಾ ಕೈಗಾರಿಕಾ ಪ್ರದೇಶದಲ್ಲಿನ ಉಕ್ಕಿನ ಘಟಕದಲ್ಲಿ ಕಾಣಿಸಿಕೊಂಡ ಅಗ್ನಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಸೂರತ್ನ ಎಎಮ್/ಎನ್ಎಸ್ ಇಂಡಿಯಾ ದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಸೂರತ್ ಪೊಲೀಸ್ ಕಮಿಷನರ್ ಅನೂಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ. ಘಟಕದ ಒಂದು ವಲಯದಲ್ಲಿ ಮಾತ್ರ ಈ ಅಗ್ನಿ ಅವಘಡ ಸಂಭವಿಸಿದೆ. ಸುಡುತ್ತಿದ್ದ ಕಲ್ಲಿದ್ದಲ್ಲು ತಕ್ಷಣ ಇಬ್ಬಾಗವಾಗಿದೆ. ಪರಿಣಾಮವಾಗಿ ಬೆಂಕಿ ಕೆನ್ನಾಲಿಗೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಫ್ಯಾಕ್ಟರಿ ಇನ್ಸ್ಪೆಕ್ಟರ್ ಕೂಡ ಘಟನೆ ಸಂಬಂಧ ಪರಿಶೀಲನೆಗೆ ಮುಂದಾಗಿದ್ದಾರೆ ಎಂದರು.
ಹಜಿರಾ ಪೊಲೀಸ್ ಠಾಣೆಯ ಅಧಿಕಾರಿಗಳ ಪ್ರಕಾರ, ಘಟನೆಯಲ್ಲಿ ನಾಲ್ವರ ಸಾವು ಸಂಭವಿಸಿದ್ದು, ಮೂವರು ಸಂತ್ರಸ್ತರು ಮರಣೋತ್ತರ ಪರೀಕ್ಷೆ ಸಿವಿಲ್ ಆಸ್ಪತ್ರೆಯಲ್ಲಿ ಸಾಗಿದೆ. ಕೊರೆಕ್ಸ್ ಘಟಕದಲ್ಲಿನ ಸಾಧನದ ವೈಫಲ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಅವರು, ಕೊರೆಕ್ಸ್ ಘಟಕದಲ್ಲಿ ಸಾಧನದ ವೈಫಲ್ಯದಿಂದಾಗಿ ಎಎಂಎನ್ಎಸ್ ಹಜಿರ ಕಾರ್ಯಾಚರಣೆಯಲ್ಲಿ ಈ ಅಪಘಾತ ಸಂಭವಿಸಿದೆ. ಮಂಗಳವಾರ ಸಂಜೆ 6ಕ್ಕೆ ಈ ಘಟನೆ ಸಂಭವಿಸಿದ್ದು, ಮುಚ್ಚಿದ ಘಟಕ ಮತ್ತೆ ಆರಂಭಿಸುವಾಗ ಈ ಅಪಘಾತ ನಡೆದಿದೆ. ಘಟನಾ ಸ್ಥಳದ ಹತ್ತಿರದ ಲಿಫ್ಟ್ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಕಂಪನಿಯ ನಾಲ್ವರು ಗುತ್ತಿಗೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.