ಕರ್ನಾಟಕ

karnataka

ETV Bharat / bharat

ಲೋಕಸಮರದಲ್ಲಿ ಸೆಲೆಬ್ರಿಟಿಗಳು: ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ? - Lok Sabha Election Results 2024

ಲೋಕಸಭೆ ಚುನಾವಣೆಯಲ್ಲಿ ಹಲವು ಸೆಲೆಬ್ರಿಟಿಗಳೂ ಕೂಡಾ ಸ್ಪರ್ಧಿಸಿದ್ದು, ಸದ್ಯ ಯಾರು ಮುನ್ನಡೆಯಲ್ಲಿದ್ದಾರೆ, ಯಾರು ಹಿನ್ನಡೆ ಕಂಡಿದ್ದಾರೆ ನೋಡೋಣ.

ls-elections-2024-bjps-kangana-ranaut-leading-from-mandi-arun-govil-trails-in-meerut
ಹೇಮಾ ಮಾಲಿನಿ (ಸಂಗ್ರಹ ಚಿತ್ರ)

By PTI

Published : Jun 4, 2024, 3:07 PM IST

ನವದೆಹಲಿ: ಉತ್ತರ ಪ್ರದೇಶದ ಮಥುರಾ ಕ್ಷೇತ್ರದಲ್ಲಿ ನಟಿ ಹಾಗು ಮೂರು ಬಾರಿ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಕಾಂಗ್ರೆಸ್​ ಅಭ್ಯರ್ಥಿ ಮುಖೇಶ್​ ಧಂಗರ್​​ ವಿರುದ್ಧ 2 ಲಕ್ಷ ಮತಗಳಿಂದ ಮುಂದಿದ್ದಾರೆ.

'ರಾಮಾಯಣ'ದ ಅರುಣ್‌ ಗೋವಿಲ್‌ಗೆ ಹಿನ್ನಡೆ: 'ರಾಮಾಯಣ' ಧಾರಾವಾಹಿ ಖ್ಯಾತಿಯ ನಟ, ಬಿಜೆಪಿ ಅಭ್ಯರ್ಥಿ ಅರುಣ್​ ಗೋವಿಲ್​ ಅವರಿಗೆ ಮೀರತ್​​ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ.

ಶತ್ರುಘ್ನ ಸಿನ್ಹಾ ಮುನ್ನಡೆ: ತೃಣಮೂಲ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸಿರುವ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಇವರು ಬಿಜೆಪಿಯ ಸುರೇಂದ್ರಜೀತ್​ ಸಿಂಗ್​ ಅಹುಲಾವಾಲಿಯಾ ವಿರುದ್ಧ 47 ಸಾವಿರ ಮತಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಕಂಗನಾ ರನೌತ್​ ಮುನ್ನಡೆ: ಹಿಮಾಚಲದ ಮಂಡಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿರುವ ಬಾಲಿವುಡ್ ನಟಿ ಕಂಗನಾ ರನೌತ್​ ಮುನ್ನಡೆಯಲ್ಲಿದ್ದಾರೆ. ಇವರು ಕಾಂಗ್ರೆಸ್​ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್​ ಅವರನ್ನು ಹಿಂದಿಕ್ಕಿ ಗೆಲುವಿನ ನಗೆ ಬೀರಲು ಸಜ್ಜಾಗಿದ್ದಾರೆ.

ಈ ಪ್ರಮುಖ ಸೆಲೆಬ್ರಿಟಿಗಳ ಹೊರತಾಗಿ, ಬಿಜೆಪಿಯ ಮನೋಜ್​ ತಿವಾರಿ ಮತ್ತು ರವಿ ಕಿಶನ್​ ಕೂಡ ಕ್ರಮವಾಗಿ ಈಶಾನ್ಯ ದೆಹಲಿ ಮತ್ತು ಗೋರಾಖ್​ಪುರದಲ್ಲಿ ಮುನ್ನಡೆ ಗಳಿಸಿದ್ದಾರೆ. ತಿವಾರಿ ಕಾಂಗ್ರೆಸ್​​ ಅಭ್ಯರ್ಥಿ ಕನ್ಹಯ್ಯ ಕುಮಾರ್​ಗಿಂತ 1 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದರೆ, ಕಿಶನ್​ ಸಮಾಜವಾದಿ ಪಕ್ಷದ ಕಜಲ್​ ನಿಶಾದ್​ ವಿರುದ್ಧ 41 ಸಾವಿರ ಮತಗಳ ಮುನ್ನಡೆ ಹೊಂದಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಿಜೆಪಿಯ ಲಾಕೆಟ್​ ಚಟರ್ಜಿ ಹಿನ್ನಡೆಯಲ್ಲಿದ್ದಾರೆ. ಅಮೇಥಿಯಲ್ಲಿ ಸಚಿವೆ ಸ್ಮೃತಿ ಇರಾನಿಗೆ ಹಿನ್ನಡೆಯಾಗಿದೆ. ಇರಾನಿ ಅವರ ಎರಡನೇ ಬಾರಿಯ ಗೆಲುವಿನ ಉತ್ಸಾಹಕ್ಕೆ ಕಾಂಗ್ರೆಸ್​ನ ಕಿಶೋರಿ ಲಾಲ್​ ಶರ್ಮಾ ಬ್ರೇಕ್​ ಹಾಕಿದ್ದಾರೆ.

ತೃಣಮೂಲ ಕಾಂಗ್ರೆಸ್​ನ ಮೊಹುವಾ ಮೊಯಿತ್ರಾ ಕೃಷ್ಣನಗರದಲ್ಲಿ ಬಿಜೆಪಿ ಅಮೃತಾ ರಾಯ್​ ವಿರುದ್ದ ಮುನ್ನಡೆಯಲ್ಲಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಮೊದಲ ಖಾತೆ ತೆರೆದ ಬಿಜೆಪಿ: ನಟ ಸುರೇಶ್​ ಗೋಪಿಗೆ ಭರ್ಜರಿ ಗೆಲುವು

ABOUT THE AUTHOR

...view details