ಕರ್ನಾಟಕ

karnataka

ETV Bharat / bharat

ವಯನಾಡ್​ ಭೀಕರ ಭೂಕುಸಿತ: ಅವಶೇಷದಡಿ ಸಿಲುಕಿದ ಜೀವಗಳ ಉಸಿರಾಟ ಪತ್ತೆ ಮಾಡಿದ ರಡಾರ್​! - WAYANAD LANDSLIDES - WAYANAD LANDSLIDES

ವಯನಾಡ್​ನಲ್ಲಿ ಸಂಭವಿಸಿದೆ ಭೂಕುಸಿತದಲ್ಲಿ ಈವರೆಗೆ 300ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇನ್ನೂ 200 ಜನರು ನಾಪತ್ತೆಯಾಗಿದ್ದಾರೆ. ಅವಶೇಷದಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ವಯನಾಡು ಭೀಕರ ಭೂಕುಸಿತ
ವಯನಾಡು ಭೀಕರ ಭೂಕುಸಿತ (ETV Bharat)

By PTI

Published : Aug 3, 2024, 5:15 PM IST

ವಯನಾಡ್ (ಕೇರಳ):ದೇವರುನಾಡು ಅಂತಲೇ ಪ್ರಸಿದ್ಧಿಯಾಗಿರುವ ಕೇರಳ ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ವಿನಾಶಕಾರಿ ಭೂಕುಸಿತಕ್ಕೆ ತುತ್ತಾಗಿರುವ ವಯನಾಡ್​ನಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಅವಶೇಷಗಳಡಿ ಸಿಲುಕಿದ ಜನರನ್ನು ರಕ್ಷಣಾ ಪಡೆಗಳು ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ ಮಾಡುತ್ತಿವೆ. ಅವಶೇಷಗಳಡಿ ಸಿಲುಕಿದವರ ಉಸಿರಾಟವನ್ನು ರಡಾರ್​​ಗಳು ಪತ್ತೆ ಮಾಡಿವೆ. ಆದರೆ, ಅದು ಮಾನವರೋ ಅಥವಾ ಪ್ರಾಣಿಯೋ ಎಂಬುದು ತಿಳಿದುಬಂದಿಲ್ಲ.

ಗುಡ್ಡಕುಸಿತದಿಂದಾಗಿ ಮಣ್ಣಿನ ಅವಶೇಷ ದೊಡ್ಡ ಪ್ರಮಾಣದಲ್ಲಿ ಗುಡ್ಡೆ ಬಿದ್ದಿದ್ದರಿಂದ ಅದರಲ್ಲಿ ಜನರು ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬದುಕುಳಿದವರ ಮತ್ತು ಶವಗಳನ್ನು ಪತ್ತೆ ಮಾಡಲು ರಡಾರ್​ಗಳನ್ನು ಬಳಸಲಾಗುತ್ತಿದೆ. ಉಸಿರಾಟ ಕಂಡುಬಂದಾಗ ರಡಾರ್​ನಲ್ಲಿನ ಬ್ಲೂ ಸಿಗ್ನಲ್​ಗಳು ಎಚ್ಚರಿಕೆ ನೀಡುತ್ತವೆ. ಮುಂಡಕ್ಕೈ ಪ್ರದೇಶದಲ್ಲಿ ಈ ಸಿಗ್ನಲ್​ಗಳು ಸೂಚನೆ ನೀಡುತ್ತಿವೆ.

ಹ್ಯಾಮ್​ ರೇಡಿಯೋ ಬಳಕೆ:ಇನ್ನು, ಕಲ್ಪೆಟ್ಟಾ ಎಂಬಲ್ಲಿ ಹ್ಯಾಮ್​ ರೇಡಿಯೋಗಳನ್ನು ಬಳಕೆ ಮಾಡಲಾಗುತ್ತಿದೆ. ಭೂಕುಸಿತ ಪೀಡಿತ ಪ್ರದೇಶಲದಲ್ಲಿ ಹವ್ಯಾಸಿ ಆಪರೇಟರ್‌ಗಳು ಅಧಿಕಾರಿಗಳಿಗೆ ನೆರವಾಗುತ್ತಿದ್ದಾರೆ. ಇವುಗಳು ರಕ್ಷಣಾ ಪ್ರಯತ್ನಗಳು ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತಿವೆ.

ಹಾನಿ ಪ್ರದೇಶದಲ್ಲಿ ಪರಿಸ್ಥಿತಿ ಭೀಕರವಾಗಿದೆ. ಮೊಬೈಲ್ ಫೋನ್ ಸೇವೆಗಳು ಬಹಳ ಸೀಮಿತ ಪ್ರಮಾಣದಲ್ಲಿ ಲಭ್ಯವಿದೆ. ಹೀಗಾಗಿ ಹ್ಯಾಮ್ ರೇಡಿಯೊ ಆಪರೇಟರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹ್ಯಾಮ್​ ರೇಡಿಯೋಗಳು ಸಂಪರ್ಕ ವ್ಯವಸ್ಥೆಯನ್ನು ಒದಗಿಸುತ್ತಿವೆ ಎಂದು ವಯನಾಡ್​ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಹೇಳಿದ್ದಾರೆ.

ರಿಸೀವರ್‌ಗಳು, ಆಂಪ್ಲಿಫೈಯರ್‌ಗಳು, ಲಾಗಿಂಗ್, ಡಿಜಿಟಲ್ ಮಾಡ್ಯುಲೇಷನ್‌ಗಳಿಂದ ಕಂಪ್ಯೂಟರ್‌ಗಳು ಮತ್ತು ಇತರ ಉಪಕರಣಗಳನ್ನು ಬಳಸಲು ಸಾಧ್ಯವಾಗುತ್ತಿದೆ. ಹ್ಯಾಮ್ ರೇಡಿಯೋ ಆಪರೇಟರ್‌ಗಳು ಟ್ರಾನ್ಸ್‌ಮಿಟರ್‌ಗಳ ಮೂಲಕ ದುರಂತದ ಪ್ರದೇಶದಿಂದ ನಿಗದಿತ ಕೇಂದ್ರಕ್ಕೆ ಮಾಹಿತಿಯನ್ನು ರವಾನಿಸುತ್ತಿದ್ದಾರೆ.

308 ಶವಗಳು ಪತ್ತೆ:ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಭೂ ಭೂಕುಸಿತದಲ್ಲಿ 308 ಸಾವುಗಳು ಸಂಭವಿಸಿವೆ ಎಂದು ಕೇರಳ ಸರ್ಕಾರ ತಿಳಿಸಿದೆ. ಭೂಕುಸಿತದಿಂದ ಹಾನಿಗೊಳಗಾದ ಮೆಪ್ಪಾಡಿ ಪ್ರದೇಶದ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈವರೆಗೆ 195 ಮೃತದೇಹಗಳು ಹಾಗೂ 113 ದೇಹದ ಭಾಗಗಳು ಪತ್ತೆಯಾಗಿವೆ ಎಂದಿದೆ.

ಭೂಕುಸಿತದಿಂದ ಪ್ರತ್ಯೇಕವಾಗಿರುವ ಚೂರಲ್ಮಲಾ ಮತ್ತು ಮುಂಡಕ್ಕೈ ಪ್ರದೇಶಗಳನ್ನು ಸಂಪರ್ಕಿಸುವ ಇರುವಂಜಿಪ್ಪುಳ ನದಿಯ ಮೇಲೆ ನಿರ್ಮಿಸಲಾದ 190 ಅಡಿ ಬೈಲಿ ಸೇತುವೆಯನ್ನು ಭಾರತೀಯ ಸೇನೆಯು ಇಂದು ಮುಂಜಾನೆ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಿದೆ.

ಇದನ್ನೂ ಓದಿ:ಅಂತಿಮ ಹಂತದಲ್ಲಿ ವಯನಾಡ್​ ರಕ್ಷಣಾ ಕಾರ್ಯ, ಇನ್ನೂ 206ಮಂದಿ ಕಣ್ಮರೆ: ಸಿಎಂ ಪಿಣರಾಯಿ - rescue operations in Wayanad

ABOUT THE AUTHOR

...view details