ನವದೆಹಲಿ:ಮಹಾ ಕುಂಭಮೇಳಕ್ಕೆ ದಿನಗಣನೆ ಶುರುವಾಗಿದೆ. ಪುಣ್ಯಸ್ನಾನಕ್ಕೆ ಪ್ರಯಾಗ್‌ರಾಜ್ ಸಕಲ ರೀತಿಯಲ್ಲಿ ಸಜ್ಜಾಗಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಭಕ್ತರು ಮಿಂದೆದ್ದು ಕೃತಾರ್ಥರಾಗಲಿದ್ದಾರೆ. ಈ ನಿಟ್ಟಿನಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಯೋಗಿ ಆದಿತ್ಯನಾಥ್ ಸರ್ಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ಕುಂಭಮೇಳವು ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ. 40 ಕೋಟಿಗೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ. ಹೀಗಾಗಿ, ದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣವನ್ನು ಸುಲಭಗೊಳಿಸಲು, ಭಾರತೀಯ ರೈಲ್ವೆಯು 32 ವಿಶೇಷ ರೈಲು ಮತ್ತು 21 ಸಾಮಾನ್ಯ ರೈಲುಗಳನ್ನು ಓಡಿಸಲಿದೆ. ಇದರ ಜೊತೆಗೆ ಇತರ ಸೌಲಭ್ಯಗಳನ್ನೂ ಒದಗಿಸುವುದಾಗಿ ಘೋಷಿಸಿದೆ.
ಕುಂಭಮೇಳದ ಸಂದರ್ಭದಲ್ಲಿ ದೆಹಲಿ ಮತ್ತು ಪ್ರಯಾಗರಾಜ್ ನಡುವೆ ಹೆಚ್ಚಿನ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರ ಅನುಕೂಲ ಗಮನದಲ್ಲಿಟ್ಟುಕೊಂಡು ಸಾಮಾನ್ಯ ರೈಲುಗಳ ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ ಪ್ರಮುಖ ರೈಲುಗಳಾದ ಪ್ರಯಾಗರಾಜ್ ಎಕ್ಸ್‌ಪ್ರೆಸ್ (12418), ಈಶಾನ್ಯ ಎಕ್ಸ್‌ಪ್ರೆಸ್ (12506), ವಂದೇ ಭಾರತ್ (22436) ಸೇರಿದಂತೆ ಒಟ್ಟು 33 ರೈಲುಗಳು ಓಡುತ್ತವೆ. ಈ ರೈಲುಗಳು ವಾರದ ಏಳು ದಿನಗಳೂ ನವದೆಹಲಿಯಿಂದ ಪ್ರಯಾಗ್‌ರಾಜ್‌ಗೆ ಲಭ್ಯವಿರುತ್ತವೆ.
ರೈಲು ಸಂಚಾರದ ವಿವರ:
ಪ್ರಯಾಗರಾಜ್ ಎಕ್ಸ್‌ಪ್ರೆಸ್ (12418):
ನಿರ್ಗಮನ: ನವದೆಹಲಿಯಿಂದ ರಾತ್ರಿ 10:10
ತಲುಪಬೇಕಾದ ಸ್ಥಳ:ಬೆಳಗ್ಗೆ 6:50ಕ್ಕೆ ಪ್ರಯಾಗರಾಜ್ ಜಂಕ್ಷನ್
ವಂದೇ ಭಾರತ್ ಎಕ್ಸ್‌ಪ್ರೆಸ್ (22436)
ನಿರ್ಗಮನ:ದೆಹಲಿಯಿಂದ ಬೆಳಗ್ಗೆ 6:00
ತಲುಪಬೇಕಾದ ಸ್ಥಳ:ಮಧ್ಯಾಹ್ನ 12:08 ಕ್ಕೆ ಪ್ರಯಾಗರಾಜ್
ಈಶಾನ್ಯ ಎಕ್ಸ್‌ಪ್ರೆಸ್ (12506):