ಇಂದೋರ್ (ಮಧ್ಯಪ್ರದೇಶ):ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಘೋರಿ ಬಾಬಾ ಲಿಂಗ ಬದಲಾಯಿಸಿಕೊಳ್ಳುವ ಉದ್ದೇಶದಿಂದ ತಪಾಸಣೆಗೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಘೋರಿ ಬಾಬಾ ಕೇದಾರನಾಥದಲ್ಲಿ ವಾಸಿಸುತ್ತಿದ್ದು, ಅಲ್ಲಿಂದ ಇಂದೋರ್‌ಗೆ ಒಂಟಿಯಾಗಿ ಕಾರಿನಲ್ಲಿ ಬಂದಿದ್ದಾರೆ. ಅವರ ಕಾರಿನ ಹೊರ ಭಾಗದಲ್ಲಿ ಅನೇಕ ಭಯಾನಕ ಚಿಹ್ನೆವುಳ್ಳ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಹಲವು ತಲೆಬುರುಡೆಗಳು ಕಂಡು ಬಂದಿವೆ. ಕಾರಿನ ಮುಂಭಾಗದಲ್ಲಿ ಅರ್ಧನಾರೀಶ್ವರ ಎಂದು ಬರೆಯಲಾಗಿದೆ. ಇದಲ್ಲದೆ, ಕಾರಿನ ಸುತ್ತಲೂ ಡೇಂಜರ್ ಎಂದು ಬರೆಯಲಾಗಿದ್ದು, ಇದನ್ನು ನೋಡಿದ ಪ್ರತಿಯೊಬ್ಬರು ಬೆಚ್ಚಿಬೀಳುತ್ತಿದ್ದಾರೆ.
ಏನಿದು ಪ್ರಕರಣ?: ಶುಕ್ರವಾರ ಇಂದೋರ್‌ನ ಖಾಸಗಿ ಆಸ್ಪತ್ರೆಯ ಮುಂದೆ ಕಾರೊಂದು ನಿಂತಿತ್ತು. ಅಲ್ಲಿಂದ ಅಘೋರಿ ಬಾಬಾ ಹೊರಬಂದು ನೇರವಾಗಿ ಆಸ್ಪತ್ರೆಯೊಳಗೆ ಹೋದರು. ಆಸ್ಪತ್ರೆಯಲ್ಲಿರುವ ಜನರ ಮನಸ್ಸಿನಲ್ಲಿ ಬಾಬಾ ಮತ್ತು ಕಾರಿನ ಬಗ್ಗೆ ವಿವಿಧ ರೀತಿಯ ಪ್ರಶ್ನೆಗಳು ಉದ್ಭವಿಸಲು ಪ್ರಾರಂಭಿಸಿದವು. ಕಾರಿನ ಅಲಂಕಾರ ಎಷ್ಟು ಭಯಾನಕವಾಗಿದೆಯೆಂದರೆ, ಈ ಬಾಬಾ ಯಾರು ಮತ್ತು ಈ ಆಸ್ಪತ್ರೆಯಲ್ಲಿ ಏನು ಮಾಡಲು ಬಂದಿದ್ದಾರೆ ಎಂದು ಜನರಿಗೆ ಅರ್ಥವಾಗಿರಲಿಲ್ಲ.
ಜನ ಪರಿಶೀಲಿಸಿ ನೋಡಿದಾಗ ಆತ ಅಘೋರಿ ಬಾಬಾ ಎಂಬುದು ತಿಳಿಯಿತು. ಬಾಬಾನ ವಯಸ್ಸು 27 ವರ್ಷ. ಬಾಬಾ ಮೂಲತಃ ದಕ್ಷಿಣ ಭಾರತದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಒಂದು ವರ್ಷದ ಹಿಂದೆ, ಅವರು ತಮ್ಮ ಮನೆಯನ್ನು ತೊರೆದು ಕೇದಾರನಾಥಕ್ಕೆ ಬಂದು ಆಶ್ರಮದಲ್ಲಿ ವಾಸಿಸಲು ಪ್ರಾರಂಭಿಸಿದರು. ಬಾಬಾ ತಮ್ಮ ಲಿಂಗವನ್ನು ಬದಲಾವಣೆ ಮಾಡಿಸಿಕೊಳ್ಳಲು ಬಂದಿದ್ದಾರೆ.
ಅರ್ಧನಾರೀಶ್ವರನಾಗುವ ಕನಸಿತ್ತು:ಒಂದು ವರ್ಷದ ಹಿಂದೆ ಬಾಬಾ ಅರ್ಧನಾರೀಶ್ವರನಾಗುವ ಕನಸು ಕಂಡಿದ್ದರು. ಈ ಕಾರಣಕ್ಕಾಗಿ ಅವರು ಅಘೋರಿ ಸಾಧು ಆದರು. ಕೆಲವು ವರ್ಷಗಳ ನಂತರ ಬಾಬಾ ಮಹಿಳೆಯಾಗಲು ಬಯಸಿದರು. ಅದಕ್ಕಾಗಿ ಬಾಬಾ ಚೆನ್ನೈನ ಆಸ್ಪತ್ರೆಯಲ್ಲಿ ಲಿಂಗ ಬದಲಾವಣೆಗೆ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದರು. ಇದರಲ್ಲಿ ಅವರ ದೇಹದಿಂದ ಪುರುಷ ಅಂಗಾಂಗಗಳನ್ನು ತೆಗೆಯಲಾಯಿತು. ಇದಾದ ಬಳಿಕ ಇಂದೋರ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯ ಅಂಗಾಂಗಗಳ ಕಸಿ ಮಾಡಲು ಮಾತುಕತೆ ನಡೆಯಿತು. ಆಸ್ಪತ್ರೆ ನೀಡಿದ ಸಮಯಕ್ಕೆ ಬಾಬಾ ಅವರೇ ಕಾರು ಚಲಾಯಿಸಿಕೊಂಡು ಕೇದಾರನಾಥದಿಂದ ಇಂದೋರ್‌ಗೆ ಬಂದಿದ್ದಾರೆ. ಬಾಬಾ ಅವರು ತಮ್ಮ ಎಲ್ಲಾ ದಾಖಲೆಗಳನ್ನು ಸಹ ತಂದಿದ್ದರು ಮತ್ತು ಆಪರೇಷನ್ ಸಮಯದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಅದಕ್ಕೆ ತಾವೇ ಹೊಣೆ ಎಂದು ಆಸ್ಪತ್ರೆ ಆಡಳಿತಕ್ಕೆ ಲಿಖಿತವಾಗಿ ನೀಡಿದ್ದರು.
ಕಾರನ್ನು ನೋಡಿ ಭಯಬಿದ್ದ ಜನ:ಅಘೋರಿ ಬಾಬಾನ ಕಾರು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಕಾರಿನ ಸುತ್ತಲೂ ವಿಚಿತ್ರವಾದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಅದು ನೋಡಲು ತುಂಬಾ ಭಯಾನಕವಾಗಿದೆ. ಕಾರಿನ ಎರಡು ಬದಿಯಲ್ಲಿ ಡೇಂಜರ್ ಎಂದು ಬರೆಯಲಾಗಿದೆ. ಚಿತಾಭಸ್ಮದೊಂದಿಗೆ ಬಾಬಾ ಅವರ ಫೋಟೋ ಕೂಡ ಇದೆ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಅನೇಕ ಮಾನವ ತಲೆಬುರುಡೆಗಳು ಕಂಡುಬಂದಿವೆ. ಕಾರಿನ ಮುಂಭಾಗದ ಗಾಜಿನ ಮೇಲೆ ಅರ್ಧನಾರೀಶ್ವರ ಮತ್ತು ಅಘೋರಿ ನಾಗಾಸಾಧು ಎಂದು ಇಂಗ್ಲಿಷ್ ಅಕ್ಷರಗಳಲ್ಲಿ ಬರೆಯಲಾಗಿದೆ. ಒಟ್ಟಿನಲ್ಲಿ ಕಾರಿನ ಅಲಂಕಾರ ಹಾಗೂ ಅದರ ಮೇಲಿರುವ ಪೋಸ್ಟರ್‌ಗಳನ್ನು ನೋಡಿದ್ರೆ ಆತಂಕ ಮೂಡುತ್ತೆ.
ಐದು ದಿನಗಳು ಅಡ್ಮಿಟ್:ಸಂಜೆಯವರೆಗೂ ಬಾಬಾ ಅವರ ಶಸ್ತ್ರಚಿಕಿತ್ಸೆ ಮುಂದುವರೆಯಿತು. ಅಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಸ್ತ್ರೀ ಜನನಾಂಗ ಮತ್ತು ಸ್ತನಗಳನ್ನು ಕಸಿ ಮಾಡಿದರು. ಸ್ತನ ವರ್ಧನೆ, ಲೆವಿಯೊ ಪ್ಲಾಸ್ಟಿ ಮತ್ತು ಯೋನಿ ಪ್ಲಾಸ್ಟಿ ಕೂಡ ಮಾಡಲಾಯಿಗಿದೆ. ಇದಾದ ನಂತರ ಅಘೋರಿ ಬಾಬಾನ ಕೆಲವು ಪರಿಚಯಸ್ಥರು ಅವರನ್ನು ನೋಡಲು ಆಸ್ಪತ್ರೆಗೆ ಬಂದರು. ಶಸ್ತ್ರಚಿಕಿತ್ಸೆಯ ನಂತರ ಬಾಬಾಗೆ ಪ್ರಜ್ಞೆ ಬಂದಿರಲಿಲ್ಲ. ಹೀಗಾಗಿ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡಿಲ್ಲ. ಸುಮಾರು 5 ದಿನಗಳ ಕಾಲ ಇಲ್ಲಿಯೇ ದಾಖಲಾಗಲಿದ್ದು, ಬಳಿಕ ಇಲ್ಲಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಓದಿ:ಈ 5 ವಿಷಯಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ: ವೈದ್ಯರೂ ಹೇಳದ ಆ ಆರೋಗ್ಯ ರಹಸ್ಯಗಳೇನು ಗೊತ್ತಾ? - DOCTORS SHOULD NEVER SAID THINGS