ಬಲೋದ್( ಛತ್ತೀಸ್‌ಗಢ):ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿ ಕೊಲೆ ಮಾಡಿ ನೆರವಾಗಿ ಪೊಲೀಸ್ ಠಾಣೆ ಬಂದು ಶರಣಾಗಿರುವ ಘಟನೆ ಕನ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಂಗ್ಲಿ ಗ್ರಾಮದಲ್ಲಿ ನಡೆದಿದೆ. ಈಶ್ವರಿ ಸಾಹು ಪತಿಯಿಂದ ಹತ್ಯೆಯಾದ ಪತ್ನಿ. ಕೇವಲ್ ಚಂದ್ ಸಾಹು ಕೊಲೆ ಮಾಡಿದ ಪತಿ ಎಂದು ಗುರುತಿಸಲಾಗಿದೆ.
ಸಣ್ಣಪುಟ್ಟ ವಿಷಯಗಳಿಗೆ ದಂಪತಿ ಪ್ರತಿದಿನ ಜಗಳವಾಡುತ್ತಿದ್ದರು. ಶುಕ್ರವಾರ ಒಂದು ಕಪ್ ಟೀ ತಯಾರಿಸುವ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಕೋಪದ ಭರದಲ್ಲಿ ಕೇವಲ್ ಅಡುಗೆ ಮನೆಯ ಬಾಗಿಲು ಲಾಕ್ ಮಾಡಿ ಈಶ್ವರಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ಗಮಸಿದ ಮಕ್ಕಳಿಬ್ಬರೂ ಬಾಗಿಲು ತೆರೆಯುವಂತೆ ಗೋಗರೆದಿದ್ದಾರೆ, ತಂದೆ ತೆಗೆಯದಿದ್ದಾಗ ಬಾಗಿಲು ಒಡೆಯಲು ಯತ್ನಿಸಿ, ವಿಫಲರಾಗಿದ್ದಾರೆ. ಅಷ್ಟರಲ್ಲಾಗಲೇ ಕೇವಲ್, ಈಶ್ವರಿಗೆ ಚಾಕುವಿನಿಂದ ಇರಿದಿದ್ದಾನೆ, ಇದರಿಂದ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಕೃತ್ಯ ಎಸಗಿದ ಬಳಿಕ ಕೇವಲ್ ಮನೆಯಿಂದ ಪರಾರಿಯಾಗಿದ್ದಾನೆ