ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ನಡೆದ ಘಟನೆಯೊಂದರಲ್ಲಿ ಪೊಲೀಸ್ ಅಧಿಕಾರಿಗಳು ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಮೇಲೆ ಲಾಠಿಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಹೇಳಿಕೆ: ಮಹಾ ಕುಂಭಮೇಳದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಮೇಲೆ ಲಾಠಿ ಪ್ರಹಾರ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ಸತ್ಯ: ಈ ಹೇಳಿಕೆ ಸುಳ್ಳು. ವಾರಾಣಸಿಯ ಗಂಗಾ ನದಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆಯನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರದ ವಿರುದ್ಧ ಸ್ವಾಮಿ ಅವಿಮುಕ್ತೇಶ್ವರಾನಂದ ನೇತೃತ್ವದ ಪ್ರತಿಭಟನೆಯ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ನ ವಿಡಿಯೋ ಇದಾಗಿದೆ.
ಹೈದರಾಬಾದ್: 2025ರ ಮಹಾಕುಂಭಮೇಳದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಲಾಠಿ ಪ್ರಹಾರ ನಡೆಸಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರ ಮೇಲೆ ಲಾಠಿ ಪ್ರಹಾರ ನಡೆಸುತ್ತಿರುವುದು ಕಾಣಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ತಮ್ಮ ಕೈಗಳನ್ನು ಅಗಲವಾಗಿ ಚಾಚಿ, "ಮಾರಿಯೆ... ಮಾರಿಯೆ. (ನನ್ನನ್ನು ಹೊಡೆಯಿರಿ, ಹೊಡೆಯಿರಿ)." ಎನ್ನುವುದು ಕಾಣಿಸುತ್ತದೆ.
ಫೇಸ್ ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ಹಿಂದೂ ಸಮುದಾಯದ ಸ್ವಾಮೀಜಿಯ ಪರಿಸ್ಥಿತಿಯನ್ನು ನೋಡಿ" ಎಂದು ಬರೆದಿದ್ದಾರೆ. (Archive)
ಫ್ಯಾಕ್ಟ್ ಚೆಕ್: ಮಹಾಕುಂಭಮೇಳದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಮೇಲೆ ಲಾಠಿ ಪ್ರಹಾರ ನಡೆದಿತ್ತಾ? ಸತ್ಯ ಇಲ್ಲಿದೆ. (ನ್ಯೂಸ್ ಮೀಟರ್)
ಮತ್ತೊಬ್ಬ ಇನ್ ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, "ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ ಹಿಂದೂ ಸಮುದಾಯದ ಸ್ವಾಮೀಜಿಯ ಪರಿಸ್ಥಿತಿಯನ್ನು ನೋಡಿ" ಎಂದು ಬರೆದಿದ್ದಾರೆ. (Archive)
ಫ್ಯಾಕ್ಟ್ ಚೆಕ್:ಈ ವಿಡಿಯೋ 2015ರದ್ದು ಮತ್ತು ಇದು 2025ರ ಮಹಾ ಕುಂಭಮೇಳಕ್ಕೆ ಸಂಬಂಧಿಸಿಲ್ಲವಾದ್ದರಿಂದ ಈ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಕೀವರ್ಡ್ ಹುಡುಕಾಟ ನಡೆಸಿದಾಗ ಸೆಪ್ಟೆಂಬರ್ 24, 2015 ರಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ‘Varanasi stalemate over idol immersion: 30-hr resistance ends with post-midnight lathicharge’ ಎಂಬ ಶೀರ್ಷಿಕೆಯ ಸುದ್ದಿ ಪ್ರಕಟವಾಗಿರುವುದು ಕಂಡು ಬಂದಿದೆ.
"ಮಂಗಳವಾರ ತಡರಾತ್ರಿ ವಾರಾಣಸಿಯಲ್ಲಿ ಗಂಗಾ ನದಿಯಲ್ಲಿ ವಿಗ್ರಹಗಳನ್ನು ವಿಸರ್ಜಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಅನುಯಾಯಿಯೊಬ್ಬರು ಸ್ವಾಮಿ ಅವಿಮುಕ್ತೇಶ್ವರಾನಂದನನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಈ ಸುದ್ದಿಯಲ್ಲಿ ಫೋಟೊ ಹಾಕಲಾಗಿದೆ.
"ಗಂಗಾ ನದಿಯಲ್ಲಿ ಗಣೇಶ ವಿಗ್ರಹವನ್ನು ವಿಸರ್ಜಿಸುವ ಬಗ್ಗೆ ವಾರಾಣಸಿಯಲ್ಲಿ ಉಂಟಾಗಿದ್ದ 30 ಗಂಟೆಗಳ ಸುದೀರ್ಘ ಬಿಕ್ಕಟ್ಟು ಬುಧವಾರ ಮುಂಜಾನೆ ಕೊನೆಗೊಂಡಿತು. ಕೆಲ ಹಿಂದೂ ಸಾಧುಗಳು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದರು. ಪೊಲೀಸರು ವಿಗ್ರಹವನ್ನು ಲಕ್ಷ್ಮಿ ಕುಂಡದಲ್ಲಿ ಮುಳುಗಿಸಿದರು. ಗಲಭೆ ಮತ್ತು ಕಲ್ಲು ತೂರಾಟದಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು, ಸಿಆರ್ಪಿಸಿಯ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಕ್ಕಾಗಿ 25 ಜನರನ್ನು ಬಂಧಿಸಲಾಗಿದೆ." ಎಂದು ವರದಿಯಲ್ಲಿ ಬರೆಯಲಾಗಿದೆ.