ಶಿರಡಿ (ಮಹಾರಾಷ್ಟ್ರ):ಗುರು ಪೂರ್ಣಿಮೆ ಹಿನ್ನೆಲೆ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ಸಾವಿರಾರು ಭಕ್ತರು ಹರಿದುಬಂದಿದ್ದರು. ಕ್ಷೇತ್ರದಲ್ಲಿ ನಡೆದ ಮೂರು ದಿನಗಳ ಗುರು ಪೂರ್ಣಿಮಾ ಉತ್ಸವದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಸಾಯಿಬಾಬಾನ ಭಕ್ತರೊಬ್ಬರು ಈ ಮೂರು ದಿನಗಳಲ್ಲಿ ಬರೋಬ್ಬರಿ 6.25 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಅಚ್ಚರಿಯಾದರೂ ಸತ್ಯ. ಈ ಮಹಾನ್ ಭಕ್ತನ ಬಗ್ಗೆ ಮಾಹಿತಿ ಇಲ್ಲವಾದರೂ, ಮಂದಿರಕ್ಕೆ ಆತ 6 ಕೋಟಿ 25 ಲಕ್ಷ ರೂಪಾಯಿಗಳನ್ನು ನೀಡಿದ್ದಾನೆ. ಇದು ಮೂರು ದಿನಗಳ ಉತ್ಸವದ ಅವಧಿಯಲ್ಲಿ ನಿತ್ಯ ನೀಡಿದ್ದಾರೆ. ಈ ಭಕ್ತರು ಉದ್ಯಮಿಗಳೋ, ವ್ಯಾಪಾರಸ್ಥರೋ, ಗಟ್ಟಿಕುಳವೋ ಏನೆಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಹುಂಡಿಯಲ್ಲಿ ಕೋಟಿ ರೂಪಾಯಿ ಕಾಣಿಕೆ ಸಂಗ್ರಹ:ಗುರು ಪೂರ್ಣಿಮಾ ಹಬ್ಬದ ಮೂರು ದಿನಗಳಂದು ಭಕ್ತರು ಗುರುದಕ್ಷಿಣೆ ಎಂದು ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ಹುಂಡಿಯಲ್ಲಿ ಹಾಕಿದ್ದಾರೆ. ಇದರಿಂದ ಹೇರಳವಾದ ದೇಣಿಗೆ ಹರಿದು ಬಂದಿದೆ. ಭಕ್ತರರೊಬ್ಬರು ನೀಡಿದ 6 ಕೋಟಿ ಹಣವಲ್ಲದೇ, ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಜೊತೆಗೆ ಮಂದಿರದ ಆವರಣದಲ್ಲಿರುವ ಇನ್ನೊಂದು ದೇಣಿಗೆ ಕೌಂಟರ್‌ನಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಶಿರಡಿಗೆ ಬರಲು ಸಾಧ್ಯವಾಗದ ಭಕ್ತರು ಆನ್‌ಲೈನ್, ಚೆಕ್, ಡಿಡಿ ಮೂಲಕ 1 ಕೋಟಿ 95 ರೂಪಾಯಿ ನೀಡಿದ್ದರೆ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 5 ಕೆಜಿ ಬೆಳ್ಳಿಯನ್ನು ಕಳುಹಿಸಿಕೊಟ್ಟಿದ್ದಾರೆ.