ಕರ್ನಾಟಕ

karnataka

ETV Bharat / bharat

ದೆಹಲಿ: ಕಲ್ಕಾಜಿ ಮಂದಿರದಲ್ಲಿ ಮಾತಾ ಜಾಗರಣೆ ವೇದಿಕೆ ಕುಸಿದು ಮಹಿಳೆ ಸಾವು - 17 ಜನರಿಗೆ ಗಾಯ

ದೆಹಲಿಯ ಕಲ್ಕಾಜಿ ಮಂದಿರದಲ್ಲಿ ಮಾತಾ ಜಾಗರಣೆಯ ಕಾರ್ಯಕ್ರಮದ ವೇದಿಕೆ ಕುಸಿದು ಬಿದ್ದಿದೆ.

Kalkaji Mandir  platform collapses  ಕಾರ್ಯಕ್ರಮದ ವೇದಿಕೆ ಕುಸಿತ  ಕಲ್ಕಾಜಿ ಮಂದಿರ  ಮಾತಾ ಜಾಗರಣೆ  ಓರ್ವ ಸಾವು  17 ಜನರಿಗೆ ಗಾಯ
ಕಲ್ಕಾಜಿ ಮಂದಿರದಲ್ಲಿ ಮಾತಾ ಜಾಗರಣೆಯ ಕಾರ್ಯಕ್ರಮದ ವೇದಿಕೆ ಕುಸಿತ: ಓರ್ವ ಮಹಿಳೆ ಸಾವು, 17 ಜನರಿಗೆ ಗಾಯ

By ETV Bharat Karnataka Team

Published : Jan 28, 2024, 12:36 PM IST

ನವದೆಹಲಿ:ಕಲ್ಕಾಜಿ ಮಂದಿರದಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಮಾತಾ ಜಾಗರಣೆ ಸಮಾರಂಭದಲ್ಲಿ ಕಬ್ಬಿಣ ಮತ್ತು ಮರದಿಂದ ತಯಾರಿಸಿದ ವೇದಿಕೆ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. 17 ಜನರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ''ಕಾರ್ಯಕ್ರಮ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 1,500ರಿಂದ 1,600 ಜನರು ಸೇರಿದ್ದರು. ಪೊಲೀಸ್​ ತಂಡ ಸ್ಥಳಕ್ಕೆ ತಲುಪಿದ ನಂತರ ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 337, 304ಎ ಮತ್ತು 188 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

''ಮುಖ್ಯ ವೇದಿಕೆಯ ಬಳಿ ಸಂಘಟಕರು ಮತ್ತು ವಿಐಪಿಗಳ ಕುಟುಂಬಗಳು ಕುಳಿತುಕೊಳ್ಳಲು ಒಂದು ಎತ್ತರದ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯನ್ನು ಮರ ಮತ್ತು ಕಬ್ಬಿಣದ ಚೌಕಟ್ಟಿನಿಂದ ಮಾಡಲಾಗಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಈ ವೇದಿಕೆಯ ಮೇಲೆ ಕುಳಿತ ಮತ್ತು ನಿಂತ ಜನರ ಭಾರ ಹೆಚ್ಚಾಗಿದ್ದರಿಂದ ಎತ್ತರದ ವೇದಿಕೆ ಕೆಳಕ್ಕೆ ಬಿತ್ತು. ವೇದಿಕೆಯ ಕೆಳಗೆ ಕುಳಿತಿದ್ದ ಕೆಲವರಿಗೆ ಗಾಯಗಳಾಗಿವೆ'' ಎಂದು ಪೊಲೀಸರು ಮಾಹಿತಿ ನೀಡಿದರು.

ಎಲ್ಲಾ ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ನಗರದ ಏಮ್ಸ್ ಟ್ರಾಮಾ ಸೆಂಟರ್, ಸಫ್ದರ್‌ಜಂಗ್ ಆಸ್ಪತ್ರೆ ಮತ್ತು ಮ್ಯಾಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ

ಇದನ್ನೂ ಓದಿ:ತಮಿಳುನಾಡು: ಲಾರಿ-ಕಾರು ಮುಖಾಮುಖಿ ಡಿಕ್ಕಿ, 6 ಜನ ಸಾವು

ABOUT THE AUTHOR

...view details