ಕರ್ನಾಟಕ

karnataka

ETV Bharat / bharat

ದಿನಕ್ಕೆ 31.66 ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರ ಕಷ್ಟ ಕಷ್ಟ: ಅಧಿಕಾರಿಗಳ ಅಳಲು - Telangana Government - TELANGANA GOVERNMENT

ಈಗ ತರಕಾರಿ, ಮಾಂಸ ಸೇರಿದಂತೆ ಆಹಾರದ ಪದಾರ್ಥಗಳ ಬೆಲೆ ಗಗನಕ್ಕೇರಿವೆ. ಆದ್ರೆ ಕಳೆದ ಆರು ವರ್ಷಗಳಿಂದ ಶಾಲೆ ಮತ್ತು ಹಾಸ್ಟೆಲ್​ ಮಕ್ಕಳ ಊಟ ಮತ್ತು ತಿಂಡಿಗೆ ನೀಡುವ ದರ ಏರಿಕೆ ಮಾಡದೇ ಮುಂದುವರಿಸಿಕೊಂಡು ಬಂದಿವೆ. ಈಗ ಗಗನಕ್ಕೇರಿರುವ ಬೆಲೆಗಳ ಮಧ್ಯೆ ಮಕ್ಕಳ ಕಲ್ಯಾಣಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನೆ ಆಗಿಲ್ಲ ಅಂತಾ ಹೇಳುತ್ತಿದ್ದು, ಸರ್ಕಾರ ನೀಡುವ ದರದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುವುದು ಕಷ್ಟ ಎನ್ನುತ್ತಿದ್ದಾರೆ.

WELFARE STUDENTS  NOT INCREASED FOR SIX YEARS  HOW TO GET NUTRITION  TELANGANA NEWS
ಕಲ್ಯಾಣ ಅಧಿಕಾರಿಗಳು ಪ್ರಶ್ನೆ (ETV Bharat)

By ETV Bharat Karnataka Team

Published : Jun 18, 2024, 3:21 PM IST

ಹೈದರಾಬಾದ್​ (ತೆಲಂಗಾಣ):ಮಕ್ಕಳಕಲ್ಯಾಣ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರ್ಷದ ಬಾಲಕನಿಗೆ ಎರಡು ಹೊತ್ತಿನ ಊಟ, ಬೆಳಗ್ಗೆ ಮತ್ತು ಸಂಜೆ ತಿಂಡಿಗೆ ಸರ್ಕಾರ ನೀಡುವ ಮೊತ್ತ 31.66 ರೂಪಾಯಿ. ಹೆಚ್ಚಿದ ಬೆಲೆಯಿಂದ ಪ್ರತಿದಿನ ಈ ಮೊತ್ತದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ, ಹಣ್ಣು ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಲ್ಯಾಣಾಧಿಕಾರಿಗಳು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ನಿಗದಿತ ಮೆನು ಜಾರಿಯಾಗದೆ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ರಾಜ್ಯದಲ್ಲಿನ ಕಲ್ಯಾಣ ಹಾಸ್ಟೆಲ್‌ಗಳು ಮತ್ತು ಗುರುಕುಲಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳಿಗೆ ಆರು ವರ್ಷಗಳ ಹಿಂದೆ ನಿರ್ಧರಿಸಿದ ಡಯಟ್ ಶುಲ್ಕದ ಪ್ರಕಾರ ಆಹಾರ ನೀಡಲಾಗುತ್ತಿದೆ. ಕಳೆದ ಎರಡ್ಮೂರು ವರ್ಷಗಳಿಂದ ಸಾಮಗ್ರಿ, ಮಾಂಸ, ತರಕಾರಿಗಳ ಬೆಲೆ ಏರಿಕೆಯಿಂದಾಗಿ ನಿಗದಿತ ಮೆನು ಜಾರಿಗೊಳಿಸಲು ಹಾಗೂ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಆಯಾ ಅಧಿಕಾರಿಗಳು ದೂರಿದ್ದಾರೆ. ಈ ಆದೇಶದಲ್ಲಿ ಹಿಂದಿನ ಸರ್ಕಾರ ಒಂದೂವರೆ ವರ್ಷದ ಹಿಂದೆಯೇ ಡಯಟ್ ಶುಲ್ಕವನ್ನು ಶೇ.25ರಿಂದ ಶೇ.27ಕ್ಕೆ ಏರಿಸುವ ನಿರ್ಧಾರ ಕೈಗೊಂಡಿದ್ದರೂ ಹಣಕಾಸು ಇಲಾಖೆಯಲ್ಲಿ ಕಡತ ಬಾಕಿ ಇದೆ.

ಒಂದು ವೇಳೆ ಈ ಹೆಚ್ಚಳ ಜಾರಿಯಾದರೆ ವಾರ್ಷಿಕ 250 ಕೋಟಿ ರೂ.ವರೆಗೆ ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2024-25ನೇ ಶೈಕ್ಷಣಿಕ ವರ್ಷವು ಜೂನ್ 12 ರಿಂದ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಡಯಟ್ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡಲು ಸಾಧ್ಯ ಎಂಬುದು ಕಲ್ಯಾಣ ನಿಲಯಗಳ ಅಧಿಕಾರಿಗಳು ಹಾಗೂ ಗುರುಕುಲಗಳ ಪ್ರಾಚಾರ್ಯರ ವಾದ. ಅಲ್ಲದೆ, ಪ್ರಸ್ತುತ ಬೆಲೆಗಳ ಪ್ರಕಾರ ಆಹಾರ ಶುಲ್ಕವನ್ನು 35 ಪ್ರತಿಶತದವರೆಗೆ ಹೆಚ್ಚಿಸಲು ಅವರು ಮನವಿ ಮಾಡುತ್ತಿದ್ದಾರೆ.

2017-18ರಲ್ಲಿ ಹೆಚ್ಚಳ: ರಾಜ್ಯ ಸರ್ಕಾರವು 2017-18ನೇ ಸಾಲಿನಲ್ಲಿ ಮೆಸ್ ಶುಲ್ಕವನ್ನು ತಿಂಗಳಿಗೆ ವರ್ಗವಾರು ರೂ.950 ರಿಂದ ರೂ.1500 ಕ್ಕೆ ಹೆಚ್ಚಿಸಿತ್ತು. ಸರ್ಕಾರ ಕಲ್ಯಾಣ ಗುರುಕುಲ, ವಸತಿ ನಿಲಯಗಳಿಗೆ ಕೆಜಿಗೆ 1 ರೂ.ಗೆ ಅಕ್ಕಿ ನೀಡುತ್ತಿದ್ದರೂ ಸಹ ಈ ಆರು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಗ ಮೊಟ್ಟೆ ಬೆಲೆ ರೂ.2.5 ಇದ್ದರೆ, ಈಗ ರೂ.6ಕ್ಕೆ ತಲುಪಿದೆ. ಮೊಟ್ಟೆ ನೀಡದ ದಿನ ಬಾಳೆಹಣ್ಣು ನೀಡಬೇಕೆಂಬ ನಿಯಮವಿದ್ದರೂ ಬಾಳೆಹಣ್ಣು 3 ರೂ.ನಿಂದ 5 ರೂ.ಗೆ ಏರಿಕೆಯಾಗಿದೆ. ಕೋಳಿ ಬೆಲೆ ದುಪ್ಪಟ್ಟಾಗಿದೆ. ಕುರಿ ಮಾಂಸದ ಬೆಲೆ ಕೆಜಿಗೆ 650 ರೂ.ನಿಂದ 900 ರೂ.ಗೆ ಏರಿದೆ. ಅಡುಗೆ ಎಣ್ಣೆ, ತರಕಾರಿಗಳ ಬೆಲೆಯೂ ದುಬಾರಿಯಾಗಿದೆ.

ಹೊಂದಾಣಿಕೆ ಸೂತ್ರ:ಬೆಲೆ ಏರಿಕೆಯಿಂದಾಗಿ ಕೆಲವು ಕಲ್ಯಾಣ ಗುರುಕುಲ ಮತ್ತು ಹಾಸ್ಟೆಲ್‌ಗಳಲ್ಲಿ ಅಧಿಕಾರಿಗಳು ಕಳೆದ ವರ್ಷದ ಮೆನುವಿನಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿದ್ದರು. ವಿದ್ಯಾರ್ಥಿಗಳಿಗೆ ತಿಂಗಳಿಗೆ ಎರಡು ಬಾರಿ ಮಟನ್ ನೀಡಬೇಕಿದ್ದರೂ ಒಮ್ಮೆ ಮಾತ್ರ ನೀಡಲಾಗುತ್ತಿದೆ. ನಾಲ್ಕಾರು ಬಾರಿ ಕೋಳಿ ಕೊಡಬೇಕೆಂಬ ನಿಯಮ ಇದ್ದರೂ ಇದು ಎರಡರಿಂದ ಮೂರು ಪಟ್ಟು ಕಡಿಮೆಯಾಗಿದೆ. ವಾರದಲ್ಲಿ ಐದಾರು ದಿನ ಒಂದು ಮೊಟ್ಟೆ, ಒಂದು ಬಾಳೆಹಣ್ಣು ನೀಡಬೇಕಾಗಿದ್ದರೂ ಈ ಎರಡರಲ್ಲಿ ಒಂದನ್ನು ಮಾತ್ರ ನೀಡಲಾಗಿತ್ತು. ಕೆಲವೆಡೆ ಸರಿಯಾಗಿ ಬಿಲ್​ ನೀಡದ ಕಾರಣ ಮತ್ತು ಹಾಲು ಪೂರೈಕೆಯಲ್ಲಿ ಸಮಸ್ಯೆಯಿಂದಾಗಿ ಮಜ್ಜಿಗೆ, ಮೊಸರು, ಮೊಸರು ವಡ ನೀಡುವುದನ್ನು ನಿಲ್ಲಿಸಿದ್ದಾರೆ.

ಓದಿ:ಅಡುಗೆಗೂ ಮೊದಲು ಅಕ್ಕಿ ನೆನೆಸಿಡುವುದರಿಂದ ಯಾವೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? - Soaked Rice Health Benefits

ABOUT THE AUTHOR

...view details