ಅನ್ನಮಯ್ಯ ಜಿಲ್ಲೆ (ಆಂಧ್ರಪ್ರದೇಶ):ಮದುವೆ ವಿಷಯಕ್ಕೆ ನಡೆದ ಗಲಾಟೆಯಲ್ಲಿ ಮಗಳು ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿ, ಸುಳ್ಳು ಕಥೆ ಕಟ್ಟಿರುವ ಘಟನೆ ಜಿಲ್ಲೆಯ ಮದನಪಲ್ಲಿಯಲ್ಲಿ ಇದೇ ತಿಂಗಳ 13ರಂದು ನಡೆದಿದೆ. ಈ ಕೊಲೆ ಪ್ರಕರಣದ ವಿವರವನ್ನು ಡಿಎಸ್‌ಪಿ ಪ್ರಸಾದ ರೆಡ್ಡಿ ಬಹಿರಂಗಪಡಿಸಿದ್ದಾರೆ
ಮದನಪಲ್ಲಿ ಪಿ ಆ್ಯಂಡ್ ಟಿ ಕಾಲೋನಿ ನಿವಾಸಿಯಾಗಿದ್ದ ನಿವೃತ್ತ ಶಿಕ್ಷಕ ದೊರಸ್ವಾಮಿ (62) ಮಗಳಿಂದ ಹತ್ಯೆಗೀಡಾಗಿದ್ದಾರೆ. ಅವರ ಪತ್ನಿ ಲತಾ ಒಂದೂವರೆ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಿಎಸ್ಸಿ ಮತ್ತು ಬಿಇಡಿ ಓದಿರುವ ತಮ್ಮ ಒಬ್ಬಳೇ ಮಗಳು ಹರಿತಾ ಮತ್ತು ದೊರಸ್ವಾಮಿ ಇಬ್ಬರೇ ಮನೆಯಲ್ಲೇ ವಾಸಿಸುತ್ತಿದ್ದರು.
ದೊರಸ್ವಾಮಿ ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನು ಆಕೆಯ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತಾಯಿಯ ಒಡವೆಗಳನ್ನೂ ಸಹ ಮಗಳಿಗೆ ಹಸ್ತಾಂತರಿಸಿದ್ದರು. ಆದ್ರೆ ಮಗಳು ಹರಿತಾ ಮಾತ್ರ ದಾರಿ ತಪ್ಪಿದ್ದಳು. ರಮೇಶ್ ಎಂಬ ಯುವಕನಿಗೆ ಹರಿತಾ ಹತ್ತಿರವಾಗಿದ್ದು, ತನ್ನ ಚಿನ್ನಾಭರಣಗಳನ್ನು ನೀಡಿದ್ದಳು. ಆದ್ರೆ ರಮೇಶ ಬಂಗಾರದ ಆಭರಣಗಳನ್ನು ಒತ್ತೆ ಇಟ್ಟು ರೂ.11.40 ಲಕ್ಷ ಸಾಲ ಪಡೆದಿದ್ದ. ಅಷ್ಟೇ ಅಲ್ಲ, ಸಾಯಿಕೃಷ್ಣ ಎಂಬ ಮತ್ತೊಬ್ಬ ಯುವಕನಿಗೆ 8 ಲಕ್ಷ ರೂ. ಸಾಲ ಸಹ ಕೊಟ್ಟಿದ್ದಳು. ಇವರಿಬ್ಬರಲ್ಲದೆ ಹರೀಶ್ ರೆಡ್ಡಿಗೂ ಈಕೆ ಆಪ್ತಳಾಗಿದ್ದಳು.