ಕರ್ನಾಟಕ

karnataka

ETV Bharat / bharat

ಮಹಾಕುಂಭದಿಂದ ಮರಳುತ್ತಿದ್ದ ಯಾತ್ರಿಗಳಿದ್ದ ಪಿಕಪ್​ ವಾಹನ ಅಪಘಾತ; 8 ಸಾವು, 12 ಮಂದಿಗೆ ಗಾಯ - ACCIDENT KILLS EIGHT DEVOTEES

ಗಾಜಿಪುರದಲ್ಲಿ ಮಹಾಕುಂಭದಿಂದ ಮರಳುತ್ತಿದ್ದ ಯಾತ್ರಿಗಳಿದ್ದ ಪಿಕಪ್​ ವಾಹನದ ಆಕ್ಸಲ್​ ಕಟ್​ ಆದ ಹಿನ್ನೆಲೆ ಅಪಘಾತ ಸಂಭವಿಸಿ 8 ಮಂದಿ ಮೃತಪಟ್ಟಿದ್ದಾರೆ.

Accident Kills Eight Devotees Returning From Maha Kumbh In Uttar Pradesh's Ghazipur
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)

By ETV Bharat Karnataka Team

Published : Feb 1, 2025, 10:06 AM IST

ಗಾಜಿಪುರ್​: ಮಹಾಕುಂಭ ಮೇಳದಿಂದ ವಾಪಸ್​ ಆಗುತ್ತಿದ್ದ ಯಾತ್ರಾರ್ಥಿಗಳಿದ್ದ ಪಿಕಪ್​ ವಾಹನ ಅಪಘಾತಕ್ಕೆ ಒಳಗಾಗಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

ಯಾತ್ರಾರ್ಥಿಗಳಿದ್ದ ಪಿಕಪ್​ ವಾಹನದ ಆಕ್ಸಲ್​​ ಬ್ರೇಕ್​ ಡೌನ್​ ಆದ ಪರಿಣಾಮ ಈ ಅನಾಹುತ ಸಂಭವಿಸಿದೆ. ವಾರಾಣಸಿ - ಗಾಜಿಪುರ್​ ಗೋರಖ್​ಪುರ್​ ಚತುಷ್ಪತದ ಸಮೀಪದ ಕುಶ್ಮಿಹಿ ಕಲಾನ್​ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಉತ್ತರ ಪ್ರದೇಶ ನೋಂದಣಿಯ ವಾಹನಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಪ್ರಯಾಗ್​ರಾಜ್​ನ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮುಗಿಸಿ ಮರಳುತ್ತಿದ್ದರು. ಈ ವೇಳೆ, ವಾಹನದ ಆಕ್ಸಲ್​ ಕಟ್ಟಾಗಿದ್ದು, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್​ ಅದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಕಪ್​ ವಾಹನದ ಮೇಲೆ ವೇಗವಾಗಿ ಬರುತ್ತಿದ್ದ ಟ್ರಕ್​ ಡಿಕ್ಕಿ ಹೊಡೆದ ರಭಸಕ್ಕೆ 8 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.

ಗಾಜಿಪುರ್​​ ಜಿಲ್ಲಾ ಮ್ಯಾಜಿಸ್ಟ್ರೇಟ್​ ಆರ್ಯಕ ಅಖೌರಿ ನೀಡಿದ ಮಾಹಿತಿ ಅನುಸಾರ, ಪಿಕಪ್​ ವಾಹನದಲ್ಲಿ 24 ಪ್ರಯಾಣಿಕರಿದ್ದರು. ಇವರೆಲ್ಲರೂ ಗೋರಖ್​​ಪುರ್​​ ಮೂಲದವರಾಗಿದ್ದು, ಮಹಾಕುಂಭ ಯಾತ್ರೆ ಮುಗಿಸಿ ಮರಳುತ್ತಿದ್ದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರನ್ನು ಗಾಜಿಯಾಪುರ್​​ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಗಾಯಾಳುಗಳ ಎಲ್ಲ ವೈದ್ಯಕೀಯ ವೆಚ್ಚವನ್ನು ಭರಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ​ ತಿಳಿಸಿದ್ದಾರೆ.

ಈ ಅಪಘಾತಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ಭರವಸೆ ನೀಡಿದ್ದಾರೆ.

ಮತ್ತೊಂದು ಅವಘಡ: ಗಾಜಿಯಾಬಾದ್​ ಜಿಲ್ಲೆಯ ಥನ ತೀಲ್​ ಮೊಡ್​ ಪ್ರದೇಶದಲ್ಲಿ ದೆಹಲಿ - ವಾಜಿರಾಬಾದ್​​ ಮಾರ್ಗದ ಭೋಪುರ ಚೌಕ್​​​ನಲ್ಲಿ ಗ್ಯಾಸ್​ ಸಿಲಿಂಡರ್​ ಸಾಗಿಸುತ್ತಿದ್ದ ಟ್ರಕ್​ ಅಗ್ನಿ ಅನಾಹುತಕ್ಕೆ ತುತ್ತಾಗಿದೆ. ಟ್ರಕ್​ನಲ್ಲಿ ಸಿಲಿಂಡರ್​ ಇದ್ದ ಕಾರಣ ಸರಣಿ ಸ್ಫೋಟ ಸಂಭವಿಸಿದೆ.

ಅಗ್ನಿ ಶಾಮಕದಳದ ಮುಖ್ಯ ಅಧಿಕಾರಿ ರಾಹುಲ್​ ಕುಮಾರ್​ ಈ ಕುರಿತು ಮಾಹಿತಿ ನೀಡಿದ್ದು, ತಕ್ಷಣಕ್ಕೆ ಅಗ್ನಿ ನಂದಿಸುವ ಕಾರ್ಯಕ್ಕೆ ಮುಂದಾಗಲಾಗಿದೆ ಆದರೆ, ಸಿಲಿಂಡರ್​ಗಳು ನಿರಂತರವಾಗಿ ಸ್ಪೋಟಿಸುತ್ತಿರುವ ಹಿನ್ನೆಲೆ ಹಲವು ಕಿ.ಮೀ ವರೆಗೆ ಅಗ್ನಿ ಭೀಕರತೆಯನ್ನು ಕಾರಣಬಹುದಾಗಿದೆ. ಈ ಅನಾಹುತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಸಾಗಿದೆ ಎಂದರು. (ಪಿಟಿಐ)

ಇದನ್ನೂ ಓದಿ: ರಾಮೇಶ್ವರಂನಲ್ಲಿ ಭಾರತದ ಮೊದಲ ಲಂಬವಾಗಿ ತೆರೆಯುವ ರೈಲ್ವೆ ಸೀ ಬ್ರಿಡ್ಜ್​ ಸಿದ್ಧ: ಶೀಘ್ರದಲ್ಲೇ ಕಾರ್ಯಾರಂಭ

ಇದನ್ನೂ ಓದಿ:ಪಿಕಪ್ ವ್ಯಾನ್- ಕ್ಯಾಂಟರ್ ನಡುವೆ ಡಿಕ್ಕಿ; 9 ಮಂದಿ ಸಾವು

ABOUT THE AUTHOR

...view details