ಅಯೋಧ್ಯೆ (ಉತ್ತರ ಪ್ರದೇಶ) :ಅಯೋಧ್ಯೆಯ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಮೊದಲು ಮತ್ತು ನಂತರವೂ ಅಯೋಧ್ಯೆಗೆ ಉಡುಗೊರೆಗಳ ಮಹಾಪೂರವೇ ಹರಿದು ಬಂದಿತ್ತು. ಇದೀಗ ಮಹಾರಾಷ್ಟ್ರದ ಭಕ್ತರೊಬ್ಬರು 80 ಕೆಜಿ ತೂಕದ 7 ಅಡಿ 3 ಇಂಚು ಉದ್ದದ ದೈತ್ಯ ಖಡ್ಗವನ್ನು ರಾಮಲಲ್ಲಾಗೆ ಅರ್ಪಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
"ನಾನು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದೇನೆ. ಐತಿಹಾಸಿಕ ಆಯುಧಗಳ ಸಂಗ್ರಹಕನಾಗಿದ್ದೇನೆ. ಈಗಾಗಲೇ ನಾನು ನನ್ನ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಅನೇಕ ಸ್ಥಳಗಳಲ್ಲಿ ನಡೆಸಿದ್ದೇನೆ. ಇಂದು ನಾನು ನಂದಕ ಖಡ್ಗ (ವಿಷ್ಣುವಿನ ಖಡ್ಗ)ವನ್ನು ಶ್ರೀರಾಮನಿಗೆ ಸಮರ್ಪಿಸಲು ತಂದಿದ್ದೇನೆ. ಈ ಖಡ್ಗದ ವಿಶೇಷತೆ ಎಂದರೆ 80 ಕೆಜಿ ತೂಕ ಮತ್ತು 7 ಅಡಿ 3 ಇಂಚು ಉದ್ದವಿದೆ'' ಎಂದು ನೀಲೇಶ್ ಅರುಣ್ ಸಾಕರ್ ತಿಳಿಸಿದ್ದಾರೆ.
"ನೀವು ಈ ಖಡ್ಗವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಗವಾನ್ ವಿಷ್ಣುವಿನ 'ದಶಾವತಾರ'ಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ಕತ್ತಿಯ ಬ್ಲೇಡ್ ಅನ್ನು ಉಕ್ಕಿನಿಂದ ಮಾಡಲಾಗಿದ್ದು, ಹಿತ್ತಾಳೆ ಹಿಡಿಕೆಯ ಮೇಲೆ ಚಿನ್ನದ ಹೊದಿಕೆ ಇದೆ" ಎಂದು ನೀಲೇಶ್ ಖಡ್ಗದ ಕುರಿತು ಮಾಹಿತಿ ನೀಡಿದರು.
ದಶಾವತಾರವು ಹಿಂದೂಗಳ ಸಂರಕ್ಷಣೆಯ ದೇವರಾದ ಭಗವಾನ್ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ದಶಾವತಾರ ಎಂಬ ಪದವು ದಾಸ ಎಂಬ ಪದದಿಂದ ಬಂದಿದೆ. ದಶ ಎಂದರೆ 'ಹತ್ತು' ಮತ್ತು ಅವತಾರ ಎಂದರೆ ಅವರೋಹಣ, ಮಾನವ ರೂಪದಲ್ಲಿ ತನ್ನ ಎಲ್ಲ ಮಹಿಮೆ ಮತ್ತು ವೈಭವದಿಂದ ಇಳಿದವನು ಎಂಬ ಅರ್ಥವನ್ನು ಈ ಪದ ನೀಡುತ್ತದೆ.