ತಾಯಿ ಮೇಲೆ ಮಗನ ಕ್ರೌರ್ಯ: ಶೌಚಕ್ಕಾಗಿ ನಿರ್ಮಿಸಿದ ಗುಂಡಿಗೆ ತಳ್ಳಿದ ಕ್ರೂರಿ! - ತಾಯಿ ಮೇಲೆ ಮಗನ ಕ್ರೂರತೆ
ಪಲ್ನಾಡು(ಆಂಧ್ರಪ್ರದೇಶ): ಕೆಲವೊಂದು ಸಂದರ್ಭಗಳಲ್ಲಿ ಅಪ್ಪ-ಅಮ್ಮ ಸಿಟ್ಟಿಗೆದ್ದು, ಸ್ವಲ್ಪ ಗದರಿಸಿದರೂ ಮಕ್ಕಳು ಸುಮ್ಮನಾಗಿಬಿಡ್ತಾರೆ. ಆದರೆ, ಇದೀಗ ಕಾಲ ಬದಲಾದಂತೆ, ಮಕ್ಕಳ ಮನಸ್ಥಿತಿ ಸಹ ಬದಲಾಗಿದೆ. ಹೀಗಾಗಿ, ಕೆಲವರು ಕ್ರೂರಿಗಳಾಗಿದ್ದಾರೆ. ಕಾಲಿ ಜಾಗದಲ್ಲಿ ಮಹಿಳೆಯೋರ್ವಳು ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿ ನಿರ್ಮಿಸಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ಮಗ, ತಾಯಿಯ ಮೇಲೆ ಹಲ್ಲೆ ನಡೆಸಿ ಶೌಚಕ್ಕಾಗಿ ನಿರ್ಮಿಸಿರುವ ಗುಂಡಿಗೆ ತಳ್ಳಿದ್ದಾನೆ. ಇದರ ಜೊತೆಗೆ ಕುಟುಂಬದ ಸದಸ್ಯರಿಗೂ ಬೆದರಿಕೆ ಹಾಕಿದ್ದಾನೆ. ಮಗನ ವರ್ತನೆಯಿಂದ ಆಕ್ರೋಶಗೊಂಡ ತಾಯಿ, ಅದೇ ಗುಂಡಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾಳೆ. ಮಗನಿಂದ ರಕ್ಷಣೆ ನೀಡುವಂತೆ ಬೇಡಿಕೊಂಡಿದ್ದಾಳೆ.