ಶಾಲಾ ಮಕ್ಕಳಿಗೆ ನಾಟಿ ಕಲಿಕೆ: ಖುಷಿಯಿಂದಲೇ ಕೃಷಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು.. - ಕೊಡಚಾದ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಪಠ್ಯದಿಂದ ಕೇವಲ ಪಠ್ಯ ವಿಷಯದ ಜ್ಞಾನ ಪಡೆಯಬಹುದು. ಆದ್ರೆ, ನಾಲ್ಕು ಗೋಡೆಗಳಿಂದ ಹೊರಗಡೆ ಪಡೆಯುವ ಜ್ಞಾನವೇ ಬೇರೆ ರೀತಿಯಾಗಿರುತ್ತದೆ. ಈ ಕ್ರಮವನ್ನು ಸಾಗರ ತಾಲೂಕಿನ ಹುಲಿದೇವರಬನದ ಶಾಲೆಯೊಂದು ಈ ಕೆಲಸ ಮಾಡುತ್ತಿದೆ. ರೈತಾಪಿ ಜೀವನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಟಿಯಿಂದ ಶಾಲೆಯವರು ಮಕ್ಕಳಿಗೆ ಭತ್ತದ ಗದ್ದೆಯಲ್ಲಿ ನಾಟಿ ಮಾಡಿಸಿದ್ದಾರೆ. ಸಾಗರದ ಹುಲಿದೇವರಬನದ ಖಾಸಗಿ ಶಾಲೆಯಾದ ಗಣಿವಾರ ಕೊಡಚಾದ್ರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯವರು ಭತ್ತದ ಗದ್ದೆಗೆ ಕರೆದುಕೊಂಡು ಹೋಗಿ ನಾಟಿ ಮಾಡುವುದು ಹೇಗೆ?. ನಾಟಿಗೂ ಮುನ್ನ ಗದ್ದೆಯನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳನ್ನು ಕೆಸರು ಗದ್ದೆಗೆ ಇಳಿಸಿ, ಭತ್ತದ ಸಸಿ ನೀಡಿ ನಾಟಿ ಮಾಡಿಸಿದ್ದಾರೆ.