ತಿರುಪತಿ ತಿಮ್ಮಪ್ಪನಿಗೆ ನಿತ್ಯ ಮಲೆನಾಡ ಗಿಡ್ಡದ ಹಾಲಿನ ಅಭಿಷೇಕ... ಇದರ ಹಿಂದಿದೆ ರಾಮಚಂದ್ರಾಪುರ ಮಠದ ಶ್ರಮ - kannadanews
ಮಲೆನಾಡ ಗಿಡ್ಡದ ಹಸುವಿನ ಹಾಲನ್ನು ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಬಳಸುವುದರಿಂದ ಇಲ್ಲಿ ಸಾಕಲಾಗಿದ್ದ ಮಲೆನಾಡ ಗಿಡ್ಡ ಗೋವುಗಳನ್ನು ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲಿ ಕೊಡಲಾಗಿದೆ. ಇನ್ನು ದೇಶದಾದ್ಯಂತ ಸುಮಾರು 150 ದೇಸಿ ತಳಿಗಳಲ್ಲಿ 37 ದೇಸಿ ತಳಿಗಳು ಬದುಕುಳಿದಿದ್ದು, ಅವುಗಳಲ್ಲಿ ಎಂಟು ತಳಿಗಳನ್ನ ಈ ಆಶ್ರಮದಲ್ಲಿ ಸಂರಕ್ಷಣೆ ಮಾಡಲಾಗುತ್ತಿದೆ.ಈ ಗೋವುಗಳಿಂದ ತಯಾರು ಮಾಡುವ ಉತ್ಪನ್ನಗಳಿಗೆ ದೇಶದೆಲ್ಲೆಡೆ ಬೇಡಿಕೆ ಇದೆ.. ಕಾಣ್ಮರೆಯಾಗುತ್ತಿರುವ ದೇಶಿ ತಳಿಗಳನ್ನು ಸಂರಕ್ಷಿಸಿ, ಉಳಿಸುವ ಜೊತೆಗೆ ಇಂಗ್ಲಿಷ್ ಮೆಡಿಸಿನ್ ಗಳಿಗೆ ಸೆಡ್ಡು ಹೊಡೆದು ಗೋ ಮೂತ್ರದಿಂದ ವಿವಿಧ ಉತ್ಪನ್ನಗಳನ್ನು ತಯಾರು ಮಾಡಿ ಸನಾತನ ಸಂಸ್ಕೃತಿಯನ್ನು ಮತ್ತೊಮ್ಮೆ ದೇಶದಲ್ಲಿ ಕಟ್ಟಲು ಹೊರಟಿರುವ ರಾಮಚಂದ್ರಾಪುರ ಆಶ್ರಮದ ಪ್ರಯತ್ನ ಶ್ಲಾಘನೀಯ.