ಜಿ.ಪಂ.ಕಚೇರಿ ಬಾಗಿಲು ಮುಚ್ಚಿ ಕೂಲಿಕಾರ್ಮಿಕರಿಂದ ಪ್ರತಿಭಟನೆ - ಸರ್ಕಾರದ ವಿರುದ್ಧ ಪ್ರತಿಭಟನೆ
ಧಾರವಾಡ: ಪೂರ್ಣ ಪ್ರಮಾಣದಲ್ಲಿ ಕೆಲಸ ನೀಡುವಂತೆ ಆಗ್ರಹಿಸಿ ರೈತ ಮತ್ತು ಕೃಷಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕೂಲಿಕಾರರು ಜಿ.ಪಂ.ಕಚೇರಿ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು. ನೂರು ದಿನಗಳ ಕಾಲ ಕೂಲಿ ಕೆಲಸ ನೀಡಬೇಕಿದೆ. ಆದರೆ, ಕೇವಲ 25 ದಿನಗಳ ಕೂಲಿಯನ್ನಷ್ಟೇ ನೀಡಲಾಗಿದೆ. ಕೂಡಲೇ ಇನ್ನುಳಿದ ದಿನಗಳ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.