ನೋಡಿ: ಜೀವಂತ ನಾಗರಹಾವಿಗೆ ಹಾಲೆರೆದು ನಾಗರಪಂಚಮಿ ಆಚರಣೆ - ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ವಿಶೇಷ ರೀತಿಯಲ್ಲಿ ಪಂಚಮಿ ಆಚರಣೆ
ಹಾವೇರಿ: ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಜೀವಂತ ನಾಗರಹಾವಿಗೆ ಹಾಲೆರೆಯುವ ಮೂಲಕ ನಾಗರಪಂಚಮಿ ಆಚರಣೆ ನಡೆಯಿತು. ಆಡೂರು ಪಕ್ಕದ ಗ್ರಾಮದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಉರಗಪ್ರೇಮಿ ಕೃಷ್ಣರೆಡ್ಡಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಕೃಷ್ಣರೆಡ್ಡಿ ನಾಗರಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲು ಹೋದಾಗ ಆಡೂರು ಗ್ರಾಮದ ಮಹಿಳೆಯರು ನಾಗರಪಂಚಮಿ ಆಚರಿಸುತ್ತಿದ್ದರು. ತಮ್ಮ ಮುಂದೆ ಜೀವಂತ ಹಾವು ಹಿಡಿದು ಹೋಗುತ್ತಿದ್ದ ಅವರಿಗೆ ಸ್ವಲ್ಪ ಹೊತ್ತು ಹಾವು ಬಿಡುವಂತೆ ತಿಳಿಸಿದ್ದಾರೆ. ನಾಗರಹಾವು ನೆಲದ ಮೇಲೆ ಹರಿದಾಡುತ್ತಿದ್ದಂತೆ ಮಹಿಳೆಯರು ಹಾಲು ಸುರಿದು ಜೀವಂತ ನಾಗಪ್ಪಗೆ ಪೂಜೆ ಸಲ್ಲಿಸಿದರು.