ನಮಗಂತೂ ಮೋದಿ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಎಲ್ಲಿ ಕಂಡರೋ ಗೊತ್ತಿಲ್ಲ: ನಲಪಾಡ್ ವ್ಯಂಗ್ಯ - ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್
ಚಾಮರಾಜನಗರ: ಮೋದಿ ತಾಯಿ ಹೃದಯ ಉಳ್ಳವರು ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ ನಮಗಂತೂ ಪ್ರಧಾನಿ ಮೋದಿ ಅವರ ತಾಯಿ ಹೃದಯ ಕಂಡಿಲ್ಲ, ಶೋಭಕ್ಕ ಅವರ ತಾಯಿ ಹೃದಯ ಎಲ್ಲಿ ಕಂಡ್ರೋ ಗೊತ್ತಿಲ್ಲ. ಮಗು ಕುಡಿಯುವ ಹಾಲಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮೊಸರು, ಅಕ್ಕಿ ಸೇರಿದಂತೆ ಎಲ್ಲದರ ಮೇಲೂ ಟ್ಯಾಕ್ಸ್ ಹೇರಿದ್ದಾರೆ. ಯುವಕರಿಗೆ ಹೇಗೆ ಕೆಲಸ ಕೊಡಿಸುವುದು, ಅವರನ್ನು ಹೇಗೆ ಮುಂದಕ್ಕೆ ತರುವುದು ಎಂಬುದು ಕಾಂಗ್ರೆಸ್ ಯೋಚನೆಯಾದರೇ ಬಿಜೆಪಿಯವರ ಯೋಚನೆ ಹೇಗೆ ಪಿಕ್ ಪಾಕೆಟ್ ಮಾಡೋದು, ದುಡ್ಡು ಮಾಡೋದು ಹೇಗೆ ಎಂಬುದಾಗಿದೆ, ಇದರ ವಿರುದ್ಧ ನಾವು ಹೋರಾಟ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ನಲಪಾಡ್ ತಿಳಿಸಿದರು.