ಸೀರೆಯುಟ್ಟು ಯುವಕನ ಅನುಮಾನಾಸ್ಪದ ಓಡಾಟ; ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಥಳಿತ
ಆನೇಕಲ್ ಪಟ್ಟಣದ ಬಳಿಯ ಕಾವಲಹೊಸಹಳ್ಳಿ ರಸ್ತೆಯ ಎಸ್.ಆರ್.ಆರ್ ಬಡಾವಣೆಯ ಬಳಿ ಸೀರೆಯುಟ್ಟು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಕಂಬಕ್ಕೆ ಕಟ್ಟಿದ ಜನರು ಥಳಿಸಿದ್ದಾರೆ. ಯುವಕನನ್ನು ಬಾಗಲಕೋಟೆ ಮೂಲದ ಜೆ.ಪಿ.ನಗರದ ನಿವಾಸಿ ಶ್ರೀಧರ್ ಎಂದು ಗುರುತಿಸಲಾಗಿದೆ. ಕೆಲಸ ಸಿಗದ ಹಿನ್ನೆಲೆಯಲ್ಲಿ ಹೊಟ್ಟೆಪಾಡಿಗಾಗಿ ಸೀರೆಯುಟ್ಟು ಭಿಕ್ಷಾಟನೆ ಮಾಡುತ್ತಿದ್ದೆ. ಅಲ್ಲದೇ, ತಾನು ಮಂಗಳಮುಖಿ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.