ವಿಡಿಯೋ: ಗಂಗಾ ನದಿಯಲ್ಲಿ ಮೀನಿನ ಬದಲು ಅಕ್ರಮ ಮದ್ಯದ ಬಾಟಲಿಗಳು ಪತ್ತೆ!
ಛಾಪ್ರಾ: ಬಿಹಾರದ ಸರನ್ ಜಿಲ್ಲೆಯ ಛಾಪ್ರಾದಲ್ಲಿ ಹರಿಯುವ ಗಂಗಾ ನದಿಯಲ್ಲಿ ಮೀನಿನ ಬದಲು ಮದ್ಯದ ಬಾಟಲಿಗಳು ಸಿಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮದ್ಯ ನಿಷೇಧವಿದ್ದರೂ ಪೊಲೀಸರು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಗಂಗಾನದಿಯಲ್ಲಿ ಮದ್ಯ ಸಾಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಬಕಾರಿ ಇಲಾಖೆ ಅಕ್ರಮ ಮದ್ಯ ದಂಧೆಕೋರರು ಮತ್ತು ಅವರ ಅಡಗುತಾಣಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಹೀಗಾಗಿ ಕಳ್ಳಸಾಗಣೆದಾರರು ದಾಳಿ ತಪ್ಪಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೂ ಸಹ ಅಬಕಾರಿ ಇಲಾಖೆಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ನದಿಯಲ್ಲಿ ಮೀನುಗಳನ್ನು ಹಿಡಿದ ಹಾಗೆ ಭಾರಿ ಪ್ರಮಾಣದ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದು ನಾಶಪಡಿಸಿದ್ದಾರೆ.