ಉಕ್ಕಿ ಹರಿಯುತ್ತಿರುವ ಯಲ್ಲಮ್ಮನಹಳ್ಳ: ಅಪಾಯವನ್ನೂ ಲೆಕ್ಕಿಸದೆ ಬೈಕ್ ಹೊತ್ತೊಯ್ದ ಯುವಕರು..!
ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಯಲ್ಲಮ್ಮನಹಳ್ಳ ಉಕ್ಕಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲಿ ಯುವಕರು ಬೈಕ್ ಹೊತ್ತೊಯ್ದಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಕೊಚ್ಚಿ ಹೋಗಿದ್ದ ತಾತ್ಕಾಲಿಕ ಸೇತುವೆ ಇನ್ನೂ ಸರಿಪಡಿಸಿಲ್ಲ. ಹಾಗಾಗಿ, ಯುವಕರು ಇಂಥ ದುಸ್ಸಾಹಸ ಮಾಡಿದ್ದಾರೆ ಎನ್ನಲಾಗಿದೆ. ನೆರೆಯ ಆಂಧ್ರ, ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹದಗೆಟ್ಟಿದ್ದು, ಜನರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.