ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ: ದ್ವೀಪದಂತೆ ಮಾರ್ಪಟ್ಟ ಐತಿಹಾಸಿಕ ಕ್ಷೇತ್ರ ಉಕ್ಕಡಗಾತ್ರಿ - ಐತಿಹಾಸಿಕ ಉಕ್ಕಡಗಾತ್ರಿ ಕ್ಷೇತ್ರ
ದಾವಣಗೆರೆ: ಶಿವಮೊಗ್ಗದ ತುಂಗಾ ಹಾಗು ಭದ್ರಾ ಜಲಾಶಯಗಳಿಂದ ಒಂದು ಲಕ್ಷ ಕ್ಯೂಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ ಪರಿಣಾಮ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ, ಪತೇಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ತಿಮ್ನಿನಕಟ್ಟೆ- ಉಕ್ಕಡಗಾತ್ರಿ ನಡುವೆ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ತುಂಗಭದ್ರಾ ನದಿ ತೀರದಲ್ಲಿರುವ ಐತಿಹಾಸಿಕ ಉಕ್ಕಡಗಾತ್ರಿ ಕ್ಷೇತ್ರ ದ್ವೀಪದಂತೆ ಮಾರ್ಪಟ್ಟಿದೆ. ಹೀಗಾಗಿ, ಉಕ್ಕಡಗಾತ್ರಿ ಕ್ಷೇತ್ರಕ್ಕೆ ಬರಬೇಕೆಂದರೆ 30 ಕಿಲೋಮೀಟರ್ ಸುತ್ತಾಕಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದ ಮುಂಭಾಗ ಇರುವ 20 ಕ್ಕೂ ಹೆಚ್ಚು ಅಂಗಡಿಗಳು ಮುಳುಗಡೆಯಾಗಿವೆ. ನದಿ ಪಾತ್ರದ ಜನರಿಗೆ ಪ್ರವಾಹದ ಬಿಸಿ ತಟ್ಟಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.