ಲಖನೌದ ಲೆವಾನ ಹೋಟೆಲ್ನಲ್ಲಿ ಬೆಂಕಿ ಅವಘಡ.. ನಾಲ್ವರ ಸಾವು - ನವದೆಹಲಿಯ ಚಾಂದಿನಿ ಚೌಕ್ ಬಳಿ ಅಗ್ನಿ ಅವಘಡ
ಲಖನೌ (ಉತ್ತರಪ್ರದೇಶ): ಇಲ್ಲಿನ ಹಜರತ್‌ಗಂಜ್ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಹೋಟೆಲ್ ಲೆವಾನಾದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್ ಲೆವಾನಾದ ಮೂರನೇ ಮಹಡಿಯಲ್ಲಿ ಇಂದು ಬೆಳಗ್ಗೆ 8.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,ತಕ್ಷಣ 15 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡವು. ಬೆಂಕಿ ಅವಘಡದಿಂದಾಗಿ ಸುಮಾರು ನಾಲ್ವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮತ್ತೊಂದು ಕಡೆ.. ನವದೆಹಲಿಯ ಚಾಂದಿನಿ ಚೌಕ್ ಬಳಿಯ ಕುಚಾಬಾಗ್ನ ಬಟ್ಟೆ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಮೊದಲ ಮಹಡಿಯಿಂದ ನಾಲ್ಕನೇ ಮಹಡಿವರೆಗೆ ಹರಡಿದೆ. ಸ್ಥಳಕ್ಕೆ ಸುಮಾರು 50ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು.