ಕರ್ನಾಟಕ

karnataka

ETV Bharat / videos

ಆನೆ ಚೆಕ್ ಪೋಸ್ಟ್.. ತಮಿಳುನಾಡು- ಕರ್ನಾಟಕ ಗಡಿ ಬಂದ್ ಮಾಡಿದ ಗಜಪಡೆ - ಈಟಿವಿ ಭಾರತ ಕನ್ನಡ

By

Published : Oct 17, 2022, 6:30 PM IST

ಚಾಮರಾಜನಗರ: ವಾಹನಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ತಡೆಗಟ್ಟುವುದು ಸಾಮಾನ್ಯ. ಆದರೆ, ತಮಿಳುನಾಡು ಮತ್ತು ಕರ್ನಾಟಕ ಗಡಿಯಾದ ಚಾಮರಾಜನಗರ ಗಡಿಭಾಗವಾದ ಆಸನೂರಿನಲ್ಲಿ ಗಜಪಡೆ ಇಂದು ಗಡಿಯನ್ನು ಬಂದ್ ಮಾಡಿದೆ. 8-10 ಆನೆಗಳ ಹಿಂಡು ಚೆಕ್ ಪೋಸ್ಟ್ ಬಳಿ ಬೀಡುಬಿಟ್ಟು ಅತ್ತಿತ್ತ ಜರುಗದ ಹಿನ್ನೆಲೆ 1 ತಾಸು ಕಾಲ ಎರಡು ಬದಿ ವಾಹನ ಸವಾರರು ಮೂಕಪ್ರೇಕ್ಷಕರಾಗಿ ನಿಲ್ಲಬೇಕಾಯಿತು. ಗಂಟೆಯ ನಂತರ ಆನೆಗಳು ಚೆಕ್​ ಪೋಸ್ಟ್​ನ್ನು ಬಿಟ್ಟು ಹೋದವು, ಬಳಿಕ ಸಂಚಾರ ಆರಂಭವಾಗಿದೆ. ಕಬ್ಬಿನ ಲಾರಿಗಳನ್ನು ತಡೆಯುತ್ತಿದ್ದ ಆನೆ ಹಿಂಡು ಇಂದು ಚೆಕ್ ಪೋಸ್ಟಿಗೆ ಎಂಟ್ರಿ ಕೊಟ್ಟು ವಾಹನ ಸವಾರರನ್ನು ಕಂಗೆಡೆಸಿದೆ.

ABOUT THE AUTHOR

...view details