ಗಣೇಶ ನಿಮಜ್ಜನಕ್ಕೆ ನಿಯೋಜಿಸಿದ್ದ ಹೆಡ್ ಕಾನ್ಸ್‌ಟೇಬಲ್‌ಗೆ ಲಾಡ್ಜ್‌ನಲ್ಲಿ ಹೃದಯಾಘಾತ, ಸಾವು: ಸಿಸಿಟಿವಿ ದೃಶ್ಯ
ಕಲಬುರಗಿ: ಅಫಜಲಪುರ ಠಾಣೆಯ ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಕಲ್ಯಾಣಿ ಗುಗ್ಗರಿ (45) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಗಣೇಶ ನಿಮಜ್ಜನ ಬಂದೋಬಸ್ತ್‌ಗಾಗಿ ಕಲ್ಯಾಣಿ ಅವರನ್ನು ನೇಮಿಸಲಾಗಿತ್ತು. ರಾತ್ರಿ ಲಾಡ್ಜ್‌ಗೆ ಬಂದ ಬಳಿಕ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಾವೇ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಬರುವ ಮೊದಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಅಲ್ಲಿದ್ದ ವ್ಯಕ್ತಿಯೊಬ್ಬರು ಸಹಾಯಕ್ಕೆ ಧಾವಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Sep 9, 2022, 1:38 PM IST