ಸತ್ತಂತೆ ನಟಿಸಿ ಬದುಕುಳಿದ ಟಾಮಿ.. ಚಿರತೆ ಬಾಯಿಂದ ಪಾರಾಯ್ತು ಬುದ್ಧಿವಂತ ಶ್ವಾನ - ಸತ್ತಂತೆ ನಟಿಸಿ ಬದುಕುಳಿದ ನಾಯಿ
ಉಡುಪಿ: ಚಾಲಾಕಿ ನಾಯಿಯೊಂದು ದಾಳಿಗೈದ ಚಿರತೆಗೇ ಚಳ್ಳೆಹಣ್ಣು ತಿನ್ನಿಸಿ ಬಚಾವಾಗಿದೆ. ಚಿರತೆ ಎಳೆದೊಯ್ಯುತ್ತಿದ್ದಾಗ ಸತ್ತಂತೆ ನಟಿಸಿದ ನಾಯಿ 'ಟಾಮಿ' ಬದುಕುಳಿದಿರುವ ಘಟನೆ ಜಿಲ್ಲೆಯ ಮಣಿಪಾಲ ಸಮೀಪ ಪರ್ಕಳದಲ್ಲಿ ನಡೆದಿದೆ. ಪರ್ಕಳ ಸಮೀಪದ ಹೆರ್ಗ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದಿಲಾಯ ಎಂಬುವರ ಮನೆಯ ನಾಯಿಯನ್ನು ಚಿರತೆಯ ಕಚ್ಚಿ ಹಿಡಿದು ಎಳೆದೊಯ್ಯಲು ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದಾಳಿ ವೇಳೆ ಕೆಲಕಾಲ ಟಾಮಿ ಸತ್ತಂತೆ ಬಿದ್ದುಕೊಂಡಿದ್ದು, ಅದೇ ಸಮಯಕ್ಕೆ ಎಚ್ಚರಗೊಂಡ ಮಾಲೀಕರು ಮನೆಯ ಲೈಟ್ ಆನ್ ಮಾಡಿದ್ದಾರೆ. ಆಗ ಹೆದರಿದ ಚಿರತೆ ನಾಯಿಯನ್ನು ಹಾಗೆಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದೆ. ಸತ್ತಂತೆ ನಟಿಸಿದ ಟಾಮಿ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಸಾವಿನ ದವಡೆಯಿಂದ ಪಾರಾಗಿದೆ.
Last Updated : Aug 13, 2022, 10:27 PM IST