ಕುಂದಗೋಳ,ಚಿಂಚೋಳಿಗೆ ಕೇಸರಿ ಅಭ್ಯರ್ಥಿಗಳು ಫೈನಲ್,ಘೋಷಣೆಯೊಂದೇ ಬಾಕಿ - ಕುಂದಗೋಳ
ಕುಂದಗೋಳ, ಚಿಂಚೋಳಿ ವಿಧಾನಸಭೆ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಲು ಬಿಜೆಪಿ ನಾಯಕರು ರಣತಂತ್ರ ರೂಪಿಸಿದ್ದಾರೆ. ಇವತ್ತು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಸೇರಿದ್ರು. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎರಡೂ ಕ್ಷೇತ್ರಗಳಿಂದ ಒಟ್ಟು ನಾಲ್ವರ ಹೆಸರುಗಳನ್ನು ಫೈನಲ್ ಮಾಡಿ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ. ಕುಂದಗೋಳ ಕ್ಷೇತ್ರಕ್ಕೆ ಎಂ.ಆರ್.ಪಾಟೀಲ್ ಮತ್ತು ಚಿಕ್ಕನಗೌಡರ್, ಚಿಂಚೋಳಿ ಕ್ಷೇತ್ರಕ್ಕೆ ರಾಮಚಂದ್ರ ಜಾಧವ್ ಮತ್ತು ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಹೆಸರನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.