ಉದಯ್ ಸಮಂತ್ ಕಾರಿನ ಮೇಲೆ ಶಿವ ಸೈನಿಕರಿಂದ ದಾಳಿ: ವಿಡಿಯೋ - ಶಾಸಕ ಉದಯ್ ಸಮಂತ್
ಪುಣೆ (ಮಹಾರಾಷ್ಟ್ರ): ಮಾಜಿ ರಾಜ್ಯ ಸಚಿವ ಹಾಗೂ ಶಿವಸೇನೆಯ ಏಕನಾಥ್ ಶಿಂಧೆ ಬಣದ ಶಾಸಕ ಉದಯ್ ಸಮಂತ್ ಅವರ ಕಾರಿನ ಮೇಲೆ ಶಿವಸೈನಿಕರು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಿನ್ನೆ(ಮಂಗಳವಾರ) ಪುಣೆಗೆ ಭೇಟಿ ನೀಡಿದ್ದು, ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆಗೆ ಉದಯ್ ಸಾವಂತ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳು ಹಾಗೂ ಉದಯ್ ಸಮಂತ್ ಕಟ್ರಾಜ್‌ನಲ್ಲಿರುವ ಶಾಸಕ ತಾನಾಜಿ ಸಾವಂತ್ ಅವರ ಮನೆಗೆ ಹೋಗುತ್ತಿದ್ದಾಗ, ಶಿವಸೈನಿಕರು ಉದಯ್ ಸಾವಂತ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನ ಹಿಂಬದಿಯ ಗಾಜು ಒಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಈ ವೇಳೆ, ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರ ಸಭೆ ಕೂಡ ಕತ್ರಾಜ್ ಚೌಕ್‌ನಲ್ಲಿ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.