ಸಾವಿರಾರೂ ಭಕ್ತರ ಸಮ್ಮುಖದಲ್ಲಿ ಯಡೂರ ವೀರಭದ್ರೇಶ್ವರನ ಅದ್ಧೂರಿ ರಥೋತ್ಸವ
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಉತ್ತರ ಕರ್ನಾಟಕದ ಪ್ರಖ್ಯಾತ ದೇವರಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಯಡೂರು ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವವು ಚೆನ್ನಮ್ಮ ವೃತ್ತದ ಮೂಲಕ ಹಳೆಯಡೂರಿನ ರುದ್ರಪಾದ ಬಸವೇಶ್ವರ ದೇವಸ್ಥಾನದ ಮೂಲಕ ಮತ್ತೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ರಥೋತ್ಸವದ ಉದ್ದಕ್ಕೂ ಭಕ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಭಕ್ತರು ತೇರಿನ ಮೇಲೆ ಕೊಬ್ಬರಿ, ಖಾರೀಕ, ಸಕ್ಕರೆ ಹೂವು ಭಕ್ತಿಯಿಂದ ಅರ್ಪಣೆ ಮಾಡಿದರು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವಕರು ಭಕ್ತಿ ಭಾವದಿಂದ ತೇರೆಳೆದು ಸಂಭ್ರಮಿಸಿದರು. ತೇರಿನ ಉದ್ದಕ್ಕೂ ಡೊಳ್ಳು ಕುಣಿತ, ಝಾಂಜ್ ಪಥಕ್ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಹಿಸಿದ್ದವು.