ಕೋಟೆ ನಾಡಲ್ಲಿ ಜಂಗಿ ಕುಸ್ತಿ: ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ ಪೈಲ್ವಾನ್ಗಳು
ಕುಸ್ತಿ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಈ ಕುಸ್ತಿ ಜನಸಾಮಾನ್ಯರಿಗಂತೂ ಅಚ್ಚುಮೆಚ್ಚು. ಮೈಸೂರು ಭಾಗದಲ್ಲಿ ಅತಿಹೆಚ್ಚು ನಡೆಯುವ ಕುಸ್ತಿ ಪಂದ್ಯಾವಳಿ ಇದೀಗ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೂ ಕಾಲಿಟ್ಟಿದೆ. ಮುರುಘಾ ಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಿತು. ಪೈಲ್ವಾನ್ಗಳಿಬ್ಬರ ಶಕ್ತಿ ಪ್ರದರ್ಶನ ವೀಕ್ಷಿಸಲು ಅಲ್ಲಿ ಜನ ಕಿಕ್ಕಿರಿದು ನೆರೆದು, ಪೈಲ್ವಾನ್ಗಳನ್ನು ಹುರಿದುಂಬಿಸಿದರು.