ಡೆಹ್ರಾಡೂನ್‌ನ ಐತಿಹಾಸಿಕ 'ಜಂಡಾ ಮೇಳ' ಆಚರಣೆ; ವಿಡಿಯೋ - ಡೆಹ್ರಾಡೂನ್‌ನ ಐತಿಹಾಸಿಕ 'ಜಾಂಡೆ ಮೇಳ'
ಡೆಹ್ರಾಡೂನ್: ಡೆಹ್ರಾಡೂನ್‌ನ ಐತಿಹಾಸಿಕ 'ಜಂಡಾ ಮೇಳ' ಶುಕ್ರವಾರದಿಂದ ಪ್ರಾರಂಭವಾಗಿದೆ. ಪಂಜಾಬ್, ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ ಬಂದ ಸೀಮಿತ ಸಂಖ್ಯೆಯ ಭಕ್ತರು ಜಂಡಾ ಜಿಯ ಆರೋಹಣಕ್ಕೆ ಸಾಕ್ಷಿಯಾದರು. ದರ್ಬಾರ್ ಸಾಹಿಬ್‌ನ ಮಹಂತ್ ದೇವೇಂದ್ರ ದಾಸ್ ಜಿ ಮಹಾರಾಜ್ ಸಮ್ಮುಖದಲ್ಲಿ ಜಂಡಾ ಜಿಗೆ ಮೊಸರು, ತುಪ್ಪ, ಗಂಗಾಜಲ್ ಮತ್ತು ಪಂಚಮೃತಗಳಿಂದ ಅಭಿಷೇಕ ಮಾಡಲಾಯಿತು. ಈಶಾನ್ಯ ಭಾರತದ ಅತಿದೊಡ್ಡ ಮೇಳಗಳಲ್ಲಿ ಜಂಡಾ ಮೇಳವೂ ಒಂದಾಗಿದ್ದು, ಕೊರೊನಾ ವೈರಸ್ ಮಾರ್ಗಸೂಚಿಗಳನ್ನು ಅನುಸರಿಸಿ ಈ ಜಾತ್ರೆಯನ್ನು ಆಚರಿಸಲಾಯಿತು.