ಊರಿಗೆಲ್ಲ ಹೆಮ್ಮೆ, ಹೆತ್ತವಳು-ಹೆಂಡ್ತಿಗೆ ಸಂಕಟ... ಹುಟ್ಟೂರಿನಲಿ ಹುತಾತ್ಮ ಯೋಧನ ಅಂತ್ಯಕ್ರಿಯೆ!
ಹುಟ್ಟಿದೂರಿಗಷ್ಟೇ ಅಲ್ಲ, ಇಡೀ ದೇಶಕ್ಕೆ ಆತ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧನೆಂಬ ಹೆಮ್ಮೆ ಇದೆ. ಆದರೆ, ಹೆತ್ತ ತಾಯಿ, ಹೆಂಡ್ತಿ ಮತ್ತು ಮಕ್ಕಳಿಗೆ ಆತ ಇನ್ನೆಂದೂ ತಮ್ಮೊಂದಿಗೆ ಇರಲ್ಲ ಅನ್ನೋ ಸಂಕಟವಿದೆ. ಜಮ್ಮು-ಕಾಶ್ಮೀರ ಗಡಿ ಭಾಗದಲ್ಲಿ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮನಾದ ವೀರ ಯೋಧ ವೀರೇಶ ಕುರಹಟ್ಟಿ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮದಲ್ಲಿ ನೆರವೇರಿತು.