ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಮಂಗನ ಅಂತ್ಯಕ್ರಿಯೆ ನಡೆಸಿದ ಗ್ರಾಮಸ್ಥರು..! - dharwad latest news
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮೃತಪಟ್ಟ ಮಂಗವೊಂದಕ್ಕೆ ಜನ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದಿದ್ದಾರೆ. ವಿದ್ಯುತ್ ಶಾಕ್ ತಗುಲಿ ಮಂಗವೊಂದು ಮೃತಪಟ್ಟಿತ್ತು. ಸ್ಥಳೀಯರು ಶಾಕ್ ತಗುಲಿದ ಮಂಗಕ್ಕೆ ಹಾಲು, ನೀರು ಕುಡಿಸಿ ಬದುಕಿಸಲು ಪ್ರಯತ್ನ ನಡೆಸಿದ್ರೂ ಅದು ಬದುಕುಳಿಯಲಿಲ್ಲ. ಬಳಿಕ ಮೃತ ಮಂಗಕ್ಕೆ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.