ಕರ್ನಾಟಕ

karnataka

ETV Bharat / videos

ಇತಿಹಾಸದಲ್ಲೇ ಮೊದಲ ಬಾರಿಗೆ ರದ್ದಾದ ವಜ್ರಮುಷ್ಠಿ ಕಾಳಗ

By

Published : Oct 26, 2020, 2:18 PM IST

ಮೈಸೂರು: ಶರನ್ನವರಾತ್ರಿಯ ವಿಜಯದಶಮಿ ದಿನ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಕೊರೋನಾ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ರದ್ದಾಗಿದೆ‌. ರಾಜಮನೆತನದಲ್ಲಿ ಶರನ್ನವರಾತ್ರಿಯ ದಿನ ವಿಜಯಯಾತ್ರೆ ಹೋಗುವ ಮುನ್ನ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಎರಡು ಜೋಡಿಗಳಿಂದ ಜಟ್ಟಿ‌ಕಾಳಗ ನಡೆಸಿ ಆನಂತರ ವಿಜಯಯಾತ್ರೆಯನ್ನು ಮಹಾರಾಜರು ಕೈಗೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ, ಸರಳವಾಗಿ ಶರನ್ನವರಾತ್ರಿಯನ್ನು ಆಚರಿಸಲು ರಾಜಮಾತೆ ಪ್ರಮೋದದೇವಿ ಒಡೆಯರ್ ನಿರ್ಧರಿಸಿದ ಕಾರಣ ಜಟ್ಟಿ ಕಾಳಗವನ್ನು ರದ್ದುಗೊಳಿಸಲಾಗಿದೆ. ಇದು ಶರನ್ನವರಾತ್ರಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿದೆ.

ABOUT THE AUTHOR

...view details