ಕರ್ನಾಟಕ

karnataka

ETV Bharat / videos

ಇತಿಹಾಸದಲ್ಲಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದು ಕಾಂಗ್ರೆಸ್... ನಾರಾಯಣಸ್ವಾಮಿಗೆ ಟಾಂಗ್​ ಕೊಟ್ಟ ಉಗ್ರಪ್ಪ! - ಹಾವೇರಿ ಸುದ್ದಿ

By

Published : Jan 23, 2020, 10:41 PM IST

Updated : Jan 23, 2020, 11:00 PM IST

ಹಾವೇರಿ ಜಿಲ್ಲಾ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಇತಿಹಾಸದಲ್ಲಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದು ಕಾಂಗ್ರೆಸ್ ಪಕ್ಷ ಆದರೆ, ನಾರಾಯಣಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದರು. ಪ್ರತಿಪಕ್ಷಗಳು ಪಾಕಿಸ್ತಾನದ ಎಜೆಂಟರಂತೆ ವರ್ತಿಸುತ್ತಿವೆ ಎಂದು ಸಂಸದ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದರು. ಇದಕ್ಕೆ ಉಗ್ರಪ್ಪ ಈ ಹೇಳಿಕೆ ಮೂಲಕ ಟಾಂಗ್​ ನೀಡಿದರು. ಮಂಗಳೂರು ಬಾಂಬ್ ಪ್ರಕರಣದಲ್ಲಿ ಕೇಂದ್ರ ರಾಜ್ಯ ಗುಪ್ತ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಪ್ರಧಾನಿ ಮೋದಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲಾಗುತ್ತಿಲ್ಲ. ಅದನ್ನ ಮರೆಮಾಚಲು ಪೌರತ್ವ ತಿದ್ದುಪಡೆಯಂತಹ ಕೆಲಸಗಳಿಗೆ ಮುಂದಾಗಿದೆ ಎಂದು ಆರೋಪಿಸಿದರು.
Last Updated : Jan 23, 2020, 11:00 PM IST

ABOUT THE AUTHOR

...view details