ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮ ಸಾರ್ಥಕ.. ಹೂಳೆತ್ತಿದ್ದ ಕೆರೆಯೀಗ ಭರ್ತಿ!! - Shree Kshetra Dharmasthala Rural Development Project
ಇತ್ತೀಚಿಗೆ ಸುರಿದ ಮಳೆಯಿಂದಾಗಿ ತುಮಕೂರು ತಾಲೂಕಿನ ಬೂಚನಹಳ್ಳಿ ಕೆರೆ ತುಂಬಿ ತುಳುಕುತ್ತಿದೆ. ಕೊರೊನಾ ಭೀತಿ ನಡುವೆಯೂ ಗ್ರಾಮಸ್ಥರು ಗ್ರಾಮದೇವತೆಗಳ ಮೆರವಣಿಗೆ ನಡೆಸಿ ಕೆರೆಗೆ ಬಾಗಿನ ಅರ್ಪಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 10 ಲಕ್ಷ ರೂಪಾಯಿ ಬಳಸಿ ಇತ್ತೀಚೆಗೆ ಕೆರೆ ಹೂಳೆತ್ತಲಾಗಿತ್ತು. ನಮ್ಮೂರು, ನಮ್ಮ ಕೆರೆ ಎಂಬ ಯೋಜನೆಯಡಿ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿ ಸಂಪೂರ್ಣ ಅಭಿವೃದ್ಧಿಯಾಗಿರುವ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದರು.